ಬೆಂಗಳೂರಿನಲ್ಲಿ ಎಮ್ಮೆಗಳ ವಿರುದ್ಧ ದೂರು ನೀಡಿದ ಟೆಕ್ಕಿಗಳು

ಸೋಮವಾರ, 23 ಜನವರಿ 2023 (16:31 IST)
ಎಮ್ಮೆಗಳ ಕಾಟಕ್ಕೆ ಹೈರಾಣಾದ ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಹೆಮ್ಮಗಳ ವಿರುದ್ಧ ದೂರು ನೀಡಿದ್ದಾರೆ.
 
ಪ್ರತಿ ನಿತ್ಯ ಎಮ್ಮೆಗಳಿಂದ ತೊಂದರೆ ಅಂತ ದೂರು ನೀಡಿದ್ದು,ಮಾರ್ನಿಂಗ್ ಟೈಮ್ ನಲ್ಲಿ ,ಆಫೀಸ್ ಹೊತ್ತಲ್ಲಿ ಎಮ್ಮೆಗಳಿಂದ ಪ್ರಾಬ್ಲಂ ಆಗ್ತಿದೆ.ದಿನನಿತ್ಯ 45 ನಿಮಿಷ ಎಮ್ಮೆಗಳಿಂದ ಟ್ರಾಫಿಕ್ ಜಾಮ್ ಆಗುತ್ತೆ, ಸರತಿ ಸಾಲಿನಲ್ಲಿ ಮಾರ್ಚ್ ಫಾಸ್ಟ್ ಮಾಡ್ತಾ ರೋಡ್ನಲ್ಲಿ ಎಮ್ಮೆಗಳು ಹೋಗ್ತಿವೆ .ನಗರದ ಕಸವನಹಳ್ಳಿ ರೋಡ್ ನಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುತ್ತೆ ಎಂದು ಟೀಟ್ವರ್ ನಲ್ಲಿ ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಜನರು ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
 
ಎಮ್ಮೆಗಳ ಸಮಸ್ಯೆಗೆ ಕ್ರಮ ಕೈಗೊಳ್ಳಲು ಟೀಟ್ವರ್ ಮೂಲಕ ಕಂಪ್ಲೆಂಟ್ ಮಾಡಿದ್ದು,ಕಳೆದ ಆರೇಳು ತಿಂಗಳಿಂದ ಎಮ್ಮೆ ಸಮ್ಯಸೆಯಿಂದ MNC ಟೆಕ್ಕಿಗಳು ಕಂಗಾಲಾಗಿದ್ದಾರೆ.ಎಮ್ಮೆಗಳಿಂದ ಟ್ರಾಫಿಕ್ ಜಾಮ್ ಆಗಿ ಆಫೀಸ್ ಗೆ ನಿತ್ಯ ತಡವಾಗುತ್ತಿದೆ.ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಿ ಅಂತ ಟ್ವೀಟ್ ಮಾಡಿ ಟೆಕ್ಕಿಗಳು ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ