ದೇವೇಗೌಡರಿಗೆ ಈಗ ತೆಲಂಗಾಣ ಸಿಎಂ, ಪ್ರಕಾಶ್ ರೈ ಬಲ!
ನಿನ್ನೆ ಜೆಡಿಎಸ್ ವರಿಷ್ಠ ದೇವೇಗೌಡರ ಮನೆಗೆ ಆಗಮಿಸಿದ ಸಿಎಂ ಚಂದ್ರಶೇಖರ್ ರಾವ್ ಮತ್ತು ಪ್ರಕಾಶ್ ರೈ ಭೋಜನ ಕೂಟದಲ್ಲಿ ಪಾಲ್ಗೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಚಂದ್ರಶೇಖರ್ ಕರ್ನಾಟಕದಲ್ಲಿರುವ ತೆಲುಗು ಭಾಷಿಕರು ಜೆಡಿಎಸ್ ಗೇ ಮತ ಹಾಕಬೇಕು, ಕುಮಾರಸ್ವಾಮಿಯವರಿಗೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ರೈ ದೇವೇಗೌಡರು ಯಾವುದೇ ಮುಕ್ತ ಭಾರತ ಮಾಡುವ ಅಥವಾ ಯಾರನ್ನೂ ಅಧಿಕಾರದಿಂದ ಕೆಳಗಿಳಿಸುವ ಯೋಚನೆ ಉಳ್ಳವರಲ್ಲ. ಅದಕ್ಕೇ ಅವರನ್ನು ಬೆಂಬಲಿಸುತ್ತಿದ್ದೇನೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.