ಕಿರುತರೆ ನಟಿ ವಿರುದ್ಧ ಆಟೋ ಚಾಲಕ ಗರಂ

ಭಾನುವಾರ, 24 ಸೆಪ್ಟಂಬರ್ 2023 (20:20 IST)
ಆಟೋ ಚಾರ್ಜ್ ಪೇಮೆಂಟ್ ಮಾಡದೆ ಇದ್ದ ಕಿರುತೆರೆ ನಟಿ ವಿರುದ್ಧ ಡ್ರೈವರ್ ಗರಂ ಆಗಿದ್ದಾರೆ. ಕಿರುತರೆ ನಟಿಯ ಕಿರಿಕ್ ಆರೋಪ ಈಗ ಎಲ್ಲೆಡೆ ಸುದ್ದಿಯಾಗಿದ್ದು ನಡು ರಸ್ತೆಯಲ್ಲಿಯೇ ನಟಿ ಆಟೋಗೆ ಪೇಮೆಂಟ್ ಮಾಡದೆ ಇಳಿದುಹೋಗಿದ್ದಾರೆ. ಪುನರ್ ವಿವಾಹ ಖ್ಯಾತಿಯ ಪದ್ಮಿನಿ ಅವರು ಆಟೋ ಚಾರ್ಜ್ ಕೊಡಲು ಕಿರಿಕ್ ಮಾಡಿರುವ ಆರೋಪ ಕೇಳಿಬಂದಿದೆ. ಆಟೋ ಚಾಲಕನ ಬಳಿ ಕಿರಿಕ್ ಮಾಡಿಕೊಂಡು ನಟಿ ಪದ್ಮಿನಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆಟೋ ಚಾರ್ಜ್ ಕೊಡದೇ ಗಲಾಟೆ ಮಾಡಿಕೊಂಡು ಆಟೋ ಇಳಿದು ಹೋದ ಪದ್ಮಿನಿ ಅವರು 437 ರೂಪಾಯಿ ಕೊಡದೆ ಮೋಸ ಮಾಡಿದ್ದಾರೆ. ಆಟೋ ಚಾರ್ಜ್ ಕೊಡದೇ ಅರ್ಧ ದಾರಿಯಲ್ಲಿ ಇಳಿದು ಹೋಗಿದ್ದ ಪದ್ಮಿನಿ ಅವರ ವಿರುದ್ಧ ಆಟೋ ಡ್ರೈವರ್ ಸಿಟ್ಟಾಗಿದ್ದಾರೆ. ಮಲ್ಲೇಶ್ವರಂನ ಮಾರ್ಗೋಸ ರಸ್ತೆಯಿಂದ ಬನಶಂಕರಿಗೆ ಆಟೋ ಬುಕ್ ಮಾಡಿದ್ದ ಪದ್ಮಿನಿ ಅವರು ಮಲ್ಲೇಶ್ವರಂನಿಂದ ಬನಶಂಕರಿ ಬಳಿ ಹೋಗಿ ಚಾಲಕ ಕುಲ್ದೀಪ್ ಬಳಿ ಕಿರಿಕ್ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ