ದೇಗುಲ ಮುಂಭಾಗ ಜೂಜಾಟ: 9 ಮಂದಿ ಅಂದರ್
ಖಾಸಗಿ ಜಮೀನೊಂದರಲ್ಲಿ ಅಂದರ್ ಬಾಹರ್ ಆಡುತ್ತಿದ್ದ 9 ಆರೋಪಿಗಳನ್ನು ಪೊಲೀಸರು ಅಂದರ್ ಮಾಡಿದ್ದಾರೆ.
ಚಾಮರಾಜನಗರದ ಹರವೆ ಗ್ರಾಮದ ಮಹದೇಶ್ವರ ದೇಗುಲದ ಮುಂಭಾಗದ ಜಮೀನಿನಲ್ಲಿ ಅಕ್ರಮ ಜೂಜಾಟ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಸಿಇಎನ್ ಇನ್ಸ್ಪೆಕ್ಟರ್ ಮಹದೇವ ಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿದೆ. ದಾಳಿ ವೇಳೆ 44,680 ರೂ. ವಶಪಡಿಸಿಕೊಂಡು, 9 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಗ್ರಾಮಾಂತರ ಠಾಣೆ ವಶಕ್ಕೆ ನೀಡಿದ್ದು, ಪ್ರಕರಣ ದಾಖಲಾಗಿದೆ.