ಬಿಹಾರ: ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ ಉದ್ಯೋಗಾವಕಾಶಗಳು ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಬಿಹಾರದ ಜನರ ಪರಿಶ್ರಮದಿಂದ ದುಬೈಯಂತಹ ನಗರ ನಿರ್ಮಾಣವಾಗಿದೆ. ನೀವು ಕಷ್ಟಪಟ್ಟು ದುಡಿಯುತ್ತಿರುವಾಗ ನಿಮಗ್ಯಾಕೆ ಉದ್ಯೋಗ ಸಿಗುತ್ತಿಲ್ಲ? ಬೇರೆ ರಾಜ್ಯಕ್ಕೆ ಕೆಲಸ ಅರಸಿ ಹೋಗುವ ಯುವಕರಿಗೆ ಬಿಹಾರದಲ್ಲಿ ಕೆಲಸ ಸಿಗದಿರುವ ಕಾರಣವೇನು ಎಂದು ಪ್ರಶ್ನೆ ಮಾಡಿದರು.
ಇನ್ನೂ ಎರಡನೆಯದು ಏನೆಂದರೆ ಚಿಕಿತ್ಸೆಗಾಗಿ ನೀವು ಬಿಹಾರದಿಂದ ನವದೆಹಲಿಯ ಏಮ್ಸ್‌ಗೆ ಯಾಕೆ ಹೋಗಬೇಕು. ಯಾಕೆ ನೀವು ಬಿಹಾರದಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ಅದಲ್ಲದೆ ನಳಂದಾದಲ್ಲಿ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾನಿಲಯವಿರಬೇಕು, ಬಿಹಾರದಲ್ಲಿ ಅತ್ಯುತ್ತಮ ಶಿಕ್ಷಣ ದೊರೆಯುತ್ತದೆ ಎಂದು ಇಡೀ ದೇಶವೇ ತಿಳಿದುಕೊಳ್ಳಬೇಕು ಎಂದರು.