‘ಕಾಂಗ್ರೆಸ್​​ನಿಂದಾಗಿ ಭಯೋತ್ಪಾದನೆ ಆರಂಭ’

ಗುರುವಾರ, 13 ಅಕ್ಟೋಬರ್ 2022 (16:06 IST)
ರಾಷ್ಟ್ರದಲ್ಲಿ ಭಯೋತ್ಪಾದನೆ ಹುಟ್ಟಿದ್ದೇ ಇಂದಿರಾಗಾಂಧಿ ಕಾಲದಲ್ಲಿ. ಕಾಂಗ್ರೆಸ್​​​​ನಿಂದಾಗಿಯೇ ಭಯೋತ್ಪಾದನೆ ಆರಂಭ ಆಯ್ತು ಎಂದು BJP ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ BJP ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​​ನವರು 60 ವರ್ಷದಲ್ಲಿ ರಾಷ್ಟ್ರವನ್ನು ಭಿಕ್ಷುಕರ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಅದೇ ನರೇಂದ್ರ ಮೋದಿ ಅವರು ಭಾರತವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತಿದ್ದಾರೆ. ಬಿಜೆಪಿ ಷಂಡ ಸರ್ಕಾರ ಅಲ್ಲ, ಹೋರಾಟ ಮಾಡೋ ಸರ್ಕಾರ. ಅದೇ ದೇಶದಲ್ಲಿ ಆತಂಕವಾದ, ಭ್ರಷ್ಟಾಚಾರ ಮಾಡಿದ್ದು ಕಾಂಗ್ರೆಸ್ ಎಂದು ಹರಿಹಾಯ್ದರು. ಸದ್ಯ ಜಗತ್ತೇ ಭಾರತದ ಕಡೆಗೆ ತಿರುಗಿ ನೋಡುತ್ತಿದೆ. ಮೋದಿ ಅವರು ಜನರ ಪರವಾಗಿ ಇದ್ದಾರೆ. ರಷ್ಯಾ-ಉಕ್ರೇನ್ ಮಧ್ಯೆ ಯುದ್ದ ನಡೆದಾಗ ಯುದ್ದವನ್ನು ಆರು ಗಂಟೆಗಳ ಕಾಲ ನಿಲ್ಲಿಸಿ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದು ಮೋದಿ. ಈಗಾಗಲೇ ಕರಾವಳಿ ಜಿಲ್ಲೆಯಲ್ಲಿ BJP ಪರವಾದ ಅಲೆಗಳನ್ನು ಕಂಡಿದ್ದೇನೆ. ಅದರಂತೆ ನವಲಗುಂದದಲ್ಲಿ BJP ಗೆಲ್ಲುತ್ತೆ ಎಂಬ ವಿಶ್ವಾಸ ಇದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ