ಕಂದಾಯ ಸಚಿವ R.ಅಶೋಕ್ ಹಿಜಾಬ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಬಗ್ಗೆ ಸರ್ಕಾರದ ನಿಲುವಿನಲ್ಲಿ ಬದಲಾವಣೆ ಇಲ್ಲ, ಸರ್ಕಾರಿ ಶಾಲೆಗೆ ಬರುವವರು ಸಮವಸ್ತ್ರ ಪಾಲನೆ ಮಾಡಬೇಕು. ಇದು ಸರ್ವಪಾಲನಾ ನಿಯಮವಾಗಿದೆ ಎಂದು ತಿಳಿಸಿದ್ರು. ಈ ನಿಯಮದ ವಿರುದ್ಧವಾಗಿ ಕೆಲವು ವಿದ್ಯಾರ್ಥಿಗಳು ಹೈಕೋರ್ಟ್ಗೆ ಹೋಗಿದ್ದರು. ಆದರೆ ಹೈಕೋರ್ಟ್ ತೀರ್ಪು ಸರ್ಕಾರದ ಪರವಾಗಿ ಬಂದಿತ್ತು. ಇದೀಗ ಸುಪ್ರೀಂ ಕೋರ್ಟ್ನಲ್ಲಿ ಭಿನ್ನ ತೀರ್ಪು ಬಂದಿದೆ. ಈಗ ಪ್ರಕರಣ ಸಿಜೆ ಬೆಂಚ್ಗೆ ವರ್ಗಾವಣೆ ಆಗಿದೆ. ಅಲ್ಲಿ ಕೂಡ ಸರ್ಕಾರದ ನಿಲುವು ಹಿಜಾಬ್ ವಿರುದ್ಧವೇ ಆಗಿರುತ್ತದೆ ಎಂದ್ರು. ವಿದ್ಯಾರ್ಥಿಗಳು ಮನೆಯಲ್ಲಿ ಏನು ಬೇಕಾದರೂ ವಸ್ತ್ರ ಹಾಕಲಿ, ಆದರೆ ಶಾಲೆಗೆ ಬರುವಾಗ ಸಮವಸ್ತ್ರ ಕಡ್ಡಾಯವಾಗಿದೆ. ಖಾಸಗಿ ಶಾಲೆಗಳಲ್ಲಿ ಸಮವಸ್ತ್ರ ಕೋಡ್ ಇದೆ ಅದರ ಪಾಲನೆ ನಡೆಯುತ್ತಿದೆ. ಇರಾನ್ನಲ್ಲಿ ಏನು ನಡೆಯುತ್ತಿದೆ, ಅಲ್ಲಿ ಮಹಿಳೆಯರು ಹಿಜಾಬ್ ಕಿತ್ತು ಬಿಸಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.