ಪಠ್ಯಪುಸ್ತಕ ವಿವಾದ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗರಂ?
ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಮಕ್ಕಳಿಗೆ ಸಾವಿನ ಬಗ್ಗೆ ಓದಿಸೋ ಅವಶ್ಯಕತೆ ಇತ್ತಾ? ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳಬೇಕಿತ್ತಾ? ಇದೆಲ್ಲವನ್ನು ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿತ್ತು.
ಒಡೆಯರ್ ಬಗ್ಗೆ ಯಾಕೆ ಪಠ್ಯ ಬಿಟ್ಟಿದ್ದರು? ಬೆಂಗಳೂರಿನಲ್ಲಿ ದೇವಸ್ಥಾನ ಇರಲಿಲ್ಲವಾ? ಯಾಕೆ ದೇವಾಲಯದ ಫೋಟೋ ಹಾಕಿಲ್ಲ? ಈಗ ಇದನ್ನ ಸರಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಅದನ್ನೂ ವಿವಾದಕ್ಕೆ ಎಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.