ಸಹೋದರಿಯ ಸ್ನೇಹಿತೆಯನ್ನೇ ಗರ್ಭಿಣಿ ಮಾಡಿದ! ಮುಂದೇನಾಯ್ತು?

ಮಂಗಳವಾರ, 31 ಮೇ 2022 (16:41 IST)
ಪಾಟ್ನಾ : ವ್ಯಕ್ತಿಯೊಬ್ಬ ಮದುವೆಯಾಗುವ ನೆಪದಲ್ಲಿ ಸಹೋದರಿಯ ಸ್ನೇಹಿತೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ್ದಲ್ಲದೇ ಅವಳಿಗೆ ಮತ್ತು ಬರುವ ಪಾನೀಯ ನೀಡಿ ಗರ್ಭಪಾತ ಮಾಡಿಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

ಯುವತಿಯು ಗರ್ಭಿಣಿಯಾದ ನಂತರ ಮದುವೆಯಾಗುವಂತೆ ಅವನಿಗೆ ಹಲವು ಬಾರಿ ಒತ್ತಾಯಿಸಿದ್ದಳು. ಆದರೆ ಆರೋಪಿ ಅದಕ್ಕೆ ನಿರಾಕರಿಸಿದ್ದನು ಎನ್ನಲಾಗಿದೆ. ನಂತರ ಅವನು ಆಕೆಗೆ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ್ದಲ್ಲದೇ ಅವಳಿಗೆ ಅಮಲು ಪದಾರ್ಥ ನೀಡಿ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದಾನೆ. 

ಈ ಹಿಂದೆ ಯುವತಿಯು ತನ್ನ ಹೆತ್ತವರಿಗೆ ಹುಡುಗನನ್ನು ಮದುವೆಯಾಗುವಂತೆ ಕೇಳಲು ಒತ್ತಾಯಿಸಿದಳು. ಆದರೆ ಅವಳ ಕುಟುಂಬವು ಸಹ ಈ ಬಗ್ಗೆ ಯಾವುದೇ ಗಮನವನ್ನು ನೀಡಲಿಲ್ಲ. ಗರ್ಭಪಾತದ ನಂತರ ಆಕೆಯ ಆರೋಗ್ಯ ಹದಗೆಟ್ಟಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಯುವತಿಯು ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಬಳಿಕ ಎಫ್ಐಆರ್ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ