ಆ. 2 ರಿಂದ ಪ್ರೈವೆಟ್ ಸ್ಕೂಲ್ ಓಪನ್?

ಶುಕ್ರವಾರ, 30 ಜುಲೈ 2021 (18:27 IST)
ಬೆಂಗಳೂರು:ಹೆಮ್ಮಾರಿ ಕೊರೊನಾ ಕಾರಣಕ್ಕೆ ಶಾಲಾ ಕಾಲೇಜುಗಳು ಬಂದ್ ಆಗಿ ವರ್ಷಗಳೇ ಉರುಳಿವೆ.  ಶಾಲೆ ಮಾತ್ರ ಓಪನ್ ಆಗೋ ಲಕ್ಷಣವೇ ಕಾಣ್ತಿಲ್ಲ. ಇನ್ನು ಕೊರೊನಾ ಸಂಖ್ಯೆ ಇಳಿಕೆ ಕಾಣುತ್ತಿದ್ದು ಶಾಲೆಗಳನ್ನು ಮತ್ತೆ ಓಪನ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಕ್ಯಾರೆ ಅಂತಿಲ್ಲ. ಹೀಗಾಗಿ ಇದೀಗ ನೂತನ ಸಿಎಂ ವಿರುದ್ದ ಖಾಸಗಿ ಶಾಲೆಗಳು ಸಿಡಿದೆದ್ದಿದ್ದು ಸಿಎಂಗೆ ಶಾಲಾರಂಭಕ್ಕೆ ಡೆಡ್ ಲೈನ್ ಫಿಕ್ಸ್ ಮಾಡಿವೆ.


ಕಣ್ಣಿಗೆ ಕಾಣದ ವೈರಸ್ ಕೊರೊನಾ ಮಹಾಮಾರಿಯಿಂದಾಗಿ ಮನುಕುಲವೇ ಸಂಕಷ್ಟಕ್ಕೆ ಸಿಲುಕಿದೆ.
ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ  ಶೈಕ್ಷಣಿಕ ಚಟುವಣಿಗಳು ಮಂಕಾಗಿವೆ. ಕಳೆದ ಒಂದುವರೆ ವರ್ಷದಿಂದ ಶಾಲೆಯ ಮುಖವನ್ನೇ ನೋಡದ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಬರೆಯುವುದು ಮರೆತುಬಿಟ್ಟಿದ್ದಾರೆ. ಸದ್ಯ ಕೊರೋನಾ ಎರಡನೇ ಕಡಿಮೆಯಾಗುತ್ತಿದ್ದು, ಶಾಲೆಗಳನ್ನು ಓಪನ್ ಮಾಡಬಹುದು ಅಂತ ಹೇಳಿ ತಜ್ಞರ ವರದಿ ಹೇಳಿದೆ. ಆದರೆ ಸರ್ಕಾರ ಆಗ್ಲಿ ಶಿಕ್ಷಣ ಇಲಾಖೆ ಆಗ್ಲಿ ಈ ಬಗ್ಗೆ ಮಾತ್ರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ಇದರಿಂದ ಬೇಸುತ್ತಿರುವ ಖಾಸಗಿ ಶಾಲೆಗಳು, ಸರ್ಕಾರ ಒಂದು ವೇಳೆ ಶಾಲೆಗಳನ್ನು ಓಪನ್ ಮಾಡ್ದೆ ಇದ್ರೆ ನಾವೇ ಕಳೆದ ವರ್ಷದ ಮಾರ್ಗಸೂಚಿಯನ್ನು ಅನುಸರಿಸಿ ತರಗತಿಯನ್ನು ಓಪನ್ ಮಾಡ್ತೇವೆ ಅಂತಿದ್ದು. ಈಗ ನೂತನ ಸಿಎಂ ಆಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿಗೆ ಶಾಲೆ ಆರಂಭಕ್ಕೆ ಡೆಡ್ ಲೈನ್ ನೀಡಿವೆ. ಇನ್ನು ಈ ಬಗ್ಗೆ ಸಿಎಂಗೆ ಭೇಟಿ ಮಾಡಿ ಶಾಲೆ ಆರಂಭಿಸುವಂತೆ ಖಾಸಗಿ ಶಾಲೆಗಳ ಸಂಘಟನೆ ಮನವಿ ಮಾಡಿದೆ.ಇನ್ನು ಶಾಲೆಗಳ ಆರಂಭಕ್ಕೆ Iಅಒಖ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ಖಾಸಗಿ ಶಾಲೆಗಳು ಶಾಲೆಗಳ ಆರಂಭಕ್ಕೆ ಪಟ್ಟು ಹಿಡಿದು ಕೂತಿವೆ.
ಆಗಸ್ಟ್ 1 ರಿಂದ ಶಾಲೆ ಆರಂಭ ಕ್ಕೆ ಸರ್ಕಾರ ಅನುಮತಿ ಕೊಡಬೇಕು ಅಂತ ಪಟ್ಟು ಹಿಡಿದಿದ್ದು. ಇಲ್ಲವಾದ್ರೆ ಕಳೆದ ವರ್ಷದ SಔP ಯನ್ನು ಫಾಲೋ ಮಾಡಿ ನಾವೇ ಶಾಲೆ ಆರಂಭ ಮಾಡುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ. ಇನ್ನು ಸರ್ಕಾರ ಶಾಲೆಗಳನ್ನ ಜೂಲೈ  31ರೊಳಗೆ ಓಪನ್ ಗೆ ಆದೆಶ ಹೊರಡಿಸದೇ ಹೋದ್ರೆ, ರೂಪ್ಸಾ ಸಂಘಟನೆ ರಾಜ್ಯದಲ್ಲಿ ಅಗಸ್ಟ್ ಎರಡರಿಂದ ಪಾಳಿ ಪದ್ದತಿಯಲ್ಲಿ ಕಳೆದ ವರ್ಷದ ಗೈಡ್ ನೊಂದಿಗೆ ಶಾಲೆ ಆರಂಭ ಮಾಡೊದಾಗಿ ಎಚ್ಚರಿಕೆ ನೀಡಿದೆ. ಇನ್ನು ಮಕ್ಕಳ ಹಿತದೃಷ್ಟಿಯಿಂದ ಶಾಲೆ ಆರಂಭ ಮಾಡೋದೇ ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಸರ್ಕಾರ ಕೂಡಲೇ ಶಾಲೆಗಳ ಆರಂಭಕ್ಕೆ ಅನುಮತಿ ನೀಡಬೇಕು ಇಲ್ಲವಾದ್ರೆ ಮಕ್ಕಳು ಬಾಲ ಕಾರ್ಮಿಕರು ಅನಕ್ಷರಸ್ಥರು ಬಾಲ್ಯವಿವಾಹಕ್ಕೆ ಬಲಿಯಾಗುತ್ತಿದ್ದಾರೆ ಮಕ್ಕಳು ಶಾಲೆಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದರಾಗಿದೆ ಹೀಗಾಗಿ ಮನವಿ ರೂಪ್ಸಾ ಮನವಿ ಪರುಗಣಿಸಿ ಶಾಲೆ ಓಪನ್ ಮಾಡುವಂತೆ ಒತ್ತಾಯ ಕೇಳಿ ಬಂದಿದ್ದು, ಸರ್ಕಾರ ಸ್ಪಂದಿಸದೇ ಶಾಲೆ ಆರಂಭ ತಡಮಾಡಿದ್ರೆ ನಾವೇ ಅಗಸ್ಟ್ ಎರಡರಿಂದ ಶಾಲೆ ಆರಂಭಿಸುವುದಾಗಿ ಖಾಸಗಿ ಶಾಲೆಗಳ ಸಂಘಟನೆ ಖಡಕ್ ಎಚ್ಚರಿಕೆ ನೀಡಿದೆ.
ಒಟ್ಟಿನಲ್ಲಿ ಮಾಜಿ  ಶಿಕ್ಷಣ ಸಚಿವರು ಜುಲೈ ಅಂತ್ಯದ ವೇಳೆಗೆ ಶಾಲೆ ಆರಂಭದ ಬಗ್ಗೆ ಕ್ರಮ ವಹಿಸೊದಾಗಿ ಹೇಳಿದ್ರು ಆದ್ರೆ ಅದು ಯಾವುದು ಜಾರಿಯಾಗದ ಹಿನ್ನಲೆ ಈಗ ಖಾಸಗಿ ಶಾಲೆಗಳು ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದು, ನೂತನ ಸಿಎಂ  ಶಾಲೆ ಆರಂಭದ ಬಗ್ಗೆ ಕ್ರಮ ವಹಿಸುತ್ತಾರ ಅಥವಾ ಖಾಸಗಿ ಶಾಲೆಗಳು ಸರ್ಕಾರವನ್ನ ಧಿಕ್ಕರಿಸಿ  ರಾಜ್ಯದಲ್ಲಿ ಶಾಲೆ ಓಪನ್ ಮಾಡೋಕೆ ರುಪ್ಸಾ ಮುಂದಾಗುತ್ತ ಎಂದು ಕಾದು ನೋಡಬೇಕಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ