10 ರೂಪಾಯಿಗಾಗಿ ನಡೆಯಿತು ಭೀಕರ ಕೊಲೆ
 
ಕೇವಲ 10 ರೂಪಾಯಿಗೋಸ್ಕರ ವ್ಯಕ್ತಿಯೊಬ್ಬರ ಕೊಲೆ ನಡೆದಿದೆ.
									
				ಪಾರ್ಕಿಂಗ್ ಮಾಡಲು 10 ರೂಪಾಯಿ ನೀಡದ ಕಾರಣಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರು ಕೊಲೆಗೀಡಾಗಿದ್ದಾರೆ.
									
				ರಾಜಧಾನಿ ಬೆಂಗಳೂರಿನ ಲಾವಣ್ಯ ಚಿತ್ರಮಂದಿರ ಹತ್ತಿರ ತಡರಾತ್ರಿ ಈ ಘಟನೆ ನಡೆದಿದೆ.
ಚಿತ್ರನೋಡಲು ಹೋದಾಗ ಪಕ್ಕದಲ್ಲಿರುವ ವಾಹನ ನಿಲುಗಡೆ ಏರಿಯಾದಲ್ಲಿ ಪುಲಿಕೇಶಿನಗರದ ಆಸ್ಟಿನ್ ಟೌನ್ ನ ಭರಣಿ ಧರನ್ ಎನ್ನುವರು ಬೈಕ್ ನಿಲ್ಲಿಸಿದ್ದರು. ಪಾರ್ಕಿಂಗ್ ಹಣ ಪಡೆಯುತ್ತಿದ್ದ ಸೆಲ್ವರಾಜ್ ಎಂಬಾತ ಪಾರ್ಕಿಂಗ್ ಫೀ 10 ರೂ. ಕೇಳಿದ್ದಾನೆ.
									
				ನಶೆಯಲ್ಲಿದ್ದ ಭರಣಿ ಧರನ್ ವಾಪಸ್ ಬಂದಾಗ ಕೊಡೋದಾಗಿ ಹೇಳಿದ್ರು. ಆದರೆ ಸೆಲ್ವರಾಜ್ ಈಗಲೇ ಕೊಡಬೇಕು ಎಂದರು. ಆಗ ಗಲಾಟೆ ನಡೆದು ಹೊಡೆದಾಟದಲ್ಲಿ ಭರಣಿ ಧರನ್ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಭಾರತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.