ತುಮಕೂರು : ಬೆಟ್ಟದ ಹಳ್ಳಿಯ ಚಂದ್ರಶೇಖರ್ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಮಲ್ಲಿಕಾರ್ಜು ದೇಸಿಕೇಂದ್ರ ಸ್ವಾಮೀಜಿ, ಗೋಡಕೆರೆ ಮಹಾ ಸಂಸ್ಥಾನದ ಮೃತ್ಯುಂಜಯ ದೇಸಿಕೇಂದ್ರ ಸ್ವಾಮೀಜಿ ಮುರುಘಾ ಮಠದ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ರಾಜ್ಯದಲ್ಲಿ ಅತಿ ಹೆಚ್ಚು ನೊಳಂಬ ಲಿಂಗಾಯಿರಿರುವ ಜಿಲ್ಲೆಗಳ ಪೈಕಿ ತುಮಕೂರಿಗೆ ಅಗ್ರಸ್ಥಾನವಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರೆಡೂ ನೊಳಂಬ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿದ ಮಠಾಧೀಶರು, ನೊಳಂಬ ಸಮುದಾಯಕ್ಕೆ ಸೇರಿದ ಮಾಧುಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ವಕ್ತಾರ ಸಿ.ಎನ್. ಚಂದ್ರಶೇಖರ್ ರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಮಾಜಿ ಸಚಿವ ವಿ. ಸೋಮಣ್ಣ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಲು ವಿವಿಧ ಮಠಾಧೀಶರಿಂದ ವಿರೋಧ ಎದುರಾಗಿದೆ. ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ನೊಳಂಬ ಲಿಂಗಾಯಿತರು ಇದ್ದು, ಅವರಿಗೆ ಟಿಕೆಟ್ ನೀಡಬೇಕೆಂದು ಮಠಾಧೀಶರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನೊಳಂಬ ಸಮುದಾಯಕ್ಕೆ ಸೇರಿದ ಶಾಸಕ ಷಡಕ್ಷರಿ, ಲೋಕೇಶ್ವರ್ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಮಠಾಧೀಶರು ಆಗ್ರಹಿಸಿದ್ದಾರೆ.