ಕುಡಿಯುವ ನೀರಿಗೆ ಚರಂಡಿ ನೀರು ಸೇರ್ಪಡೆ ; ಹಾಸಿಗೆ ಹಿಡಿದ ನೂರಾರು ಜನರು

ಮಂಗಳವಾರ, 25 ಫೆಬ್ರವರಿ 2020 (12:39 IST)
ಕುಡಿಯುವ ನೀರಿನ ಪೈಪ್ ಲೈನ್ ಗೆ ಚರಂಡಿ ನೀರು ಸೇರ್ಪಡೆಗೊಂಡ ಪರಿಣಾಮ ಕಲುಷಿತ ನೀರನ್ನು ಕುಡಿದ ನೂರಾರು ಜನರು ಅಸ್ವಸ್ಥಗೊಂಡಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲ್ಲೂರ (ಬಿ) ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ವರದಿಯಾಗಿರುವುದರಿಂದ
ಗ್ರಾಮಕ್ಕೆ ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ ಭೇಟಿ ನೀಡಿದರು.

ಅಲ್ಲೂರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಗ್ರಾಮದ ಕುಡಿಯುವ ನೀರಿನ ಹಳೆಯ ಪೈಪಲೈನಗೆ ಚರಂಡಿ ನೀರು ಸೇರುತ್ತಿದೆ. ಕುಡಿಯುವ ನೀರು ಕಲುಷಿತವಾಗಿರುವುದರಿಂದ ವಾಂತಿ-ಬೇಧಿ ಪ್ರಕರಣಗಳು ಕಂಡು ಬಂದಿರುತ್ತದೆ. ಈ ಮೊದಲೇ ದೂರವಾಣಿ ಮುಖಾಂತರ ಪಿ.ಡಿ.ಓ. ಅವರಿಗೆ  ಪೈಪಲೈನಗಳನ್ನು ಬದಲಾವಣೆ ಮಾಡಲು ಸೂಚಿಸಲಾಗಿತ್ತು. ಭೇಟಿ ಸಂದರ್ಭದಲ್ಲಿ ಪೈಪಲೈನಗಳು ಬದಲಾವಣೆ ಮಾಡುತ್ತಿರುವುದು ಕಂಡು ಬಂದಿತು.

ಗ್ರಾಮ ಪಂಚಾಯತದ ಪಿ.ಡಿ.ಓ. ಹಾಗೂ ಕಾರ್ಯದರ್ಶಿಗಳಿಗೆ ಗ್ರಾಮದಲ್ಲಿ ಕೊಳಚೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಲು ಕಟ್ಟು-ನಿಟ್ಟಿನ ಸೂಚನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ ನೀಡಿದರು. ಗ್ರಾಮದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರು ಕಾಯಿಸಿ- ಆರಿಸಿ ಕುಡಿಯಲು ಡಂಗೂರ ಸಾರಿಸಲು  ತಿಳಿಸಿದರು. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ