ಹಳ್ಳ ಹಿಡಿದ ಮಹತ್ವಾಕಾಂಕ್ಷಿ ಯೋಜನೆ

ಭಾನುವಾರ, 6 ಫೆಬ್ರವರಿ 2022 (20:02 IST)
ಬಿಬಿಎಂಪಿ ಡಯಾಬಿಟಿಸ್ ಕೇಂದ್ರಗಳೇ ಕಣ್ಮರೆ- ನಗರದಲ್ಲಿ ಒಂದಾದಾಗಿ ಬಾಗಿಲು ಮುಚ್ಚುತ್ತಿವೆ ಬಿಬಿಎಂಪಿ ಡಯಾಲಿಸಿಸ್ ಸೆಂಟರ್ಸ್- ಇತ್ತೀಚಿನ ದಿನಗಳಲ್ಲಿ ಸಕ್ಕರೆ ಖಾಯಿಲೆಗೆ ತುಂಬಾ ಜನ ತುತ್ತಾಗ್ತಿದ್ದಾರೆ- ಹೀಗೆ ಕಿಡ್ನಿ ವೈಫಲ್ಯದಂತಹ ರೋಗಿಗಳಿಗಾಗಿಯೇ ಬಿಬಿಎಂಪಿ ಡಯಾಲಿಸಿಸ್ ಸೆಂಟರ್ ತೆರೆದಿತ್ತು- ಬಿಬಿಎಂಪಿಯ ವತಿಯಿಂದ ಒಟ್ಟು 8 ಡಯಾಲಿಸಿಸ್ ಸೆಂಟರ್ ಗಳನ್ನ ನಿರ್ಮಿಸಲಾಗಿತ್ತು- ಕೆಲವೇ ವರ್ಷಕ್ಕೆ ಕಾರಣವೇಳದೆಯೇ ಕ್ಲೋಸ್ ಮಾಡಿರುವ ಬಿಬಿಎಂಪಿ- ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೆಂದು ನಿರ್ಮಿಸಿದ ಡಯಾಲಿಸಿಸ್ ಸೆಂಟರ್ಸ್ ಈಗ ನಾಪತ್ತೆ- ದಯಾನಂದನಗರದ ಶೇಷಾದ್ರಿಪುರಂ ವಾರ್ಡ್ ನಲ್ಲಿ ಕಳೆದ 2 ವರ್ಷದಿಂದ ಡಯಾಲಿಸಿಸ್ ಸೆಂಟರ್ ಕ್ಲೋಸ್- ನಗರದ ಜೆ.ಪಿ ಪಾರ್ಕ್ ಬಳಿ ಇದ್ದಂತಹ ಡಯಾಲಿಸಿಸ್ ಸೆಂಟರ್ ಸಹ ಒಂದೂವರೆ ವರ್ಷದಿಂದ ಕ್ಲೋಸ್- ಪ್ರತೀ ಡಯಾಲಿಸಿಸ್ ಕೇಂದ್ರದಲ್ಲಿ 10 ಯಂತ್ರಗಳನ್ನ ಅಳವಡಿಸಲಾಗಿದೆ- ಕೇಂದ್ರ ಸರ್ಕಾರ ಪ್ರತಿ ಯಂತ್ರೋಪಕರಣಗಳಿಗೂ 1 ಕೋಟಿ ರೂಪಾಯಿ ವೆಚ್ಚ ಮಾಡಿದೆ- ಆದರೀಗ ಆ ಯಂತ್ರಗಳೂ ಕಾಣಿಸುತ್ತಿಲ್ಲ, ಡಯಾಬಿಟಿಸ್ ಕೇಂದ್ರಗಳು ಸಹ ಕಣ್ಮರೆ- ಜನರಿಗೆ ತಲುಪಬೇಕಾದ ಸೌಲಭ್ಯ ಸಿಗದೆ ವಂಚಿತರಾಗ್ತಿದ್ದಾರೆ- ಸದ್ಯ ಜನ ಬರ್ತಿಲ್ಲ, ಹೀಗಾಗಿ ನಿರ್ವಹಣೆ ವೆಚ್ಚ, ಸಂಬಳ ನಷ್ಟದ ಲೆಕ್ಕ ನೀಡುತ್ತಿರುವ ಬಿಬಿಎಂಪಿ- ಬಿಬಿಎಂಪಿ ನಡೆ ವಿರುದ್ಧ ಸ್ಥಳೀಯ ಆಕ್ರೋಶ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ