ರೈತ ಮಹಿಳೆಗೆ ಬಗ್ಗೆ ಅವಹೇಳನಕಾರ ಹೇಳಿಕೆ; ಸಿಎಂ ಕುಮಾರಸ್ವಾಮಿ ವಿರುದ್ಧ ದೂರು ದಾಖಲು
ಮಂಗಳವಾರ, 20 ನವೆಂಬರ್ 2018 (10:18 IST)
ಬೆಂಗಳೂರು : ರೈತ ಮಹಿಳೆ ಅವಮಾನ ಮಾಡಿದ್ದಕ್ಕೆಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಮಾನವ ಹಕ್ಕು ಆಯೋಗದಲ್ಲಿದೂರು ದಾಖಲಾಗಿದೆ.
ಬೆಳಗಾವಿಯಲ್ಲಿ ಕಬ್ಬಿನ ಬಾಕಿ ಬಿಲ್ ಪಾವತಿ ಹಾಗೂ ಬೆಂಬಲ ಬೆಲೆ ನಿಗದಿಗಾಗಿ ರೈತರು ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿ ರೈತ ಮಹಿಳೆ ಜಯಶ್ರೀ ಎಂಬುವವರಿಗೆ ಸಿಎಂ ಕುಮಾರಸ್ವಾಮಿ , 4 ವರ್ಷದಿಂದ ಎಲ್ಲಿ ಮಲಗಿದ್ದೆ? ಎಂದು ಅವಮಾನ ಮಾಡಿದ್ದರು ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನವು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಾನವ ಹಕ್ಕು ಆಯೋಗದಲ್ಲಿ ದೂರು ದಾಖಲಿಸಲಾಗಿದೆ.
ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಐಪಿಸಿ ಸೆಕ್ಷನ್ 504 ಹಾಗೂ 509 ಅಡಿ ಸೂಕ್ತ ತನಿಖೆ ನಡೆಸಿ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿ-ಐಜಿಪಿ ನೀಲಮಣಿ ಎನ್. ರಾಜುಗೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.