ಕಾಂಗ್ರೆಸ್ ನಾಯಕರಿಂದ ಆರ್.ಅಶೋಕ‌್‌ಗೆ ಬ್ಲಾಕ್‌ಮೇಲ್?: ಬಿಜೆಪಿಗೆ ಅನುಮಾನ

ಸೋಮವಾರ, 6 ನವೆಂಬರ್ 2017 (13:34 IST)
ಬಿಜೆಪಿ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮಾಜಿ ಡಿಸಿಎಂ ಆರ್.ಅಶೋಕ್‌ರನ್ನು ಬ್ಲ್ಯಾಕ್‌ಮೇಲ್ ಮಾಡಿದ್ರಾ ಎನ್ನುವ ಅನುಮಾನ ಬಿಜೆಪಿ ನಾಯಕರಲ್ಲಿ ಕಾಡುತ್ತಿದೆ.
ಪರಿವರ್ತನಾ ಯಾತ್ರೆ ಫ್ಲಾಪ್ ಮಾಡಲು ಕಾಂಗ್ರೆಸ್ ಷಡ್ಯಂತ್ರ ರಚಿಸಿತ್ತಾ? ಯಾತ್ರೆಯ ಉಸ್ತುವಾರಿ ಹೊತ್ತಿದ್ದ ಮಾಜಿ ಸಚಿವ ಆರ್.ಅಶೋಕ್, ಕೊನೆಗಳಿಗೆಯಲ್ಲಿ ವಿಫಲವಾಗಿದ್ದೇಕೆ ಎನ್ನುವ ಚಿಂತೆ ಬಿಜೆಪಿ ಮುಖಂಡರಲ್ಲಿ ಕಾಡುತ್ತಿದೆ.
 
ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಮಾಜಿ ಸಚಿವ ಆರ್.ಅಶೋಕ್, ಬಗರ್ ಹುಕುಂ ಭೂಮಿ ಹಂಚಿಕೆಯಲ್ಲಿ ನಡೆದ ಅವ್ಯವಹಾರದಲ್ಲಿ ಭಾಗಿಯಾಗಿದ್ದರು. ಇದರಿಂದ ಸರಕಾರಕ್ಕೆ 10 ಸಾವಿರ ಕೋಟಿ ರೂಪಾಯಿ ನಷ್ಟವಾಗಿತ್ತು. ಮಾರ್ಕ್‌ಪೋಲೋ ಬಸ್ ಖರೀದಿಯಲ್ಲಿ ಕೂಡಾ ಭಾರಿ ಅವ್ಯವಹಾರವಾಗಿರುವುದು ಕೂಡಾ ಸರಕಾರದ ಗಮನಕ್ಕೆ ಬಂದಿತ್ತು ಎನ್ನಲಾಗಿದೆ.
 
ಒಂದು ವೇಳೆ, ಯಾತ್ರೆ ಸಫಲವಾದಲ್ಲಿ ಎರಡೂ ಪ್ರಕರಣಗಳನ್ನು ಎಸ್‌‍ಐಟಿಗೆ ಹಸ್ತಾಂತರಿಸುವುದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಸಚಿವರೊಬ್ಬರು ಆರ್.ಅಶೋಕ್‌ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.
 
ಮತ್ತೊಂದು ಕಡೆ, ಶೋಬಾ ಕರಂದ್ಲಾಜೆಯವರೊಂದಿಗಿನ ಭಿನ್ನಮತವೇ ಮಾಜಿ ಸಚಿವ ಆರ್.ಅಶೋಕ್ ಮೌನವಾಗಿರಲು ಕಾರಣ ಎನ್ನಲಾಗುತ್ತಿದೆ. ಸತ್ಯಾಸತ್ಯತೆ ಶೀಘ್ರ ಬಹಿರಂಗವಾಗಲಿದೆ ಎಂದು ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ