ದುಬಾರಿ ಎಲ್‌ಪಿಜಿ ಸಿಲಿಂಡರ್, ದುಬಾರಿ ಅಗತ್ಯ ವಸ್ತುಗಳು, ಪೊಳ್ಳು ಭಾಷಣ ಮಾಡುವುದೇ ನಿಮ್ಮ ಕಾಯಕವಾಗಿದೆ. ದರ ಏರಿಕೆಯನ್ನು ನಿಯಂತ್ರಿಸಿ. ಉದ್ಯೋಗಗಳನ್ನು ಸೃಷ್ಟಿ ಮಾಡಿ. ಇಲ್ಲವಾದಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಹೊರಡಿ ಎಂದು ಟ್ವಿಟ್ ಮಾಡಿದ್ದಾರೆ.
ಗುಜರಾತ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಜನತೆಯನ್ನು ಆಕರ್ಷಿಸುತ್ತಿರುವ ರಾಹುಲ್, ವಿಶೇಷವಾಗಿ ಸಾಮಾಜಿಕ ಅಂತರ್ಜಾಲ ಬಳಕೆದಾರರ ಮನಗೆದ್ದಿದ್ದಾರೆ. ಮೋದಿ ಸರಕಾರದ ವಿರುದ್ಧ ದರ ಏರಿಕೆ, ನಿರುದ್ಯೋಗ, ನೋಟು ನಿಷೇಧ, ದುರ್ಬಲ ಆರ್ಥಿಕತೆ, ಜಿಎಸ್‌ಟಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.