ಜಿ.ಪರಮೇಶ್ವರ್ ಲೋಫರ್ ಎಂದ ಬಿಜೆಪಿ ಅಕಾಂಕ್ಷಿ

ಮಂಗಳವಾರ, 16 ಜನವರಿ 2018 (18:48 IST)
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಲೋಫರ್ ಎಂದು ಕೊರಟಗೆರೆ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ವೈ.ಎಚ್.ಹುಚ್ಚಯ್ಯ ಅವರು ಅವಾಚ್ಯವಾಗಿ ನಿಂದಿಸಿದ್ದಾರೆ.
 
ಕೊರಟಗೆರೆ ಕ್ಷೇತ್ರದ ಹರಿಯಪ್ಪನ ಹಳ್ಳಿಯಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಜಿ. ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹುಚ್ಚಯ್ಯ ಆರೋಪಿಸಿದಾಗ ಪರಮೇಶ್ವರ್ ಬೆಂಬಲಿಗ ರಾಜು ಮಧ್ಯಪ್ರವೇಶಿಸಿ ವರದಿಗೆ ವಿರೋಧ ವ್ಯಕ್ತಪಡಿಸಿದಕ್ಕೆ ಸಾಕ್ಷ್ಯ ಕೊಡಿ ಎಂದು ಪ್ರಶ್ನಿಸಿದ್ದಾರೆ. 
 
ಈ ವೇಳೆ ಸಿಡಿಮಿಡಿಗೊಂಡ ಹುಚ್ಚಯ್ಯ ಆ ಲೋಫರ್ ಹೆಸರು ಹೇಳಬೇಡ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರಾಜು ಮಾತಿನ ಚಕಮಕಿ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ