ಬ್ರಹ್ಮ ರಥೋತ್ಸವದಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಶನಿವಾರ, 24 ಆಗಸ್ಟ್ 2019 (17:05 IST)
ಬ್ರಹ್ಮ ರಥೋತ್ಸವದ ಸಂಭ್ರಮ ಜೋರಾಗಿದ್ದು, ಸಹಸ್ರಾರು ಭಕ್ತರ ಜಯಘೋಷ ಮುಗಿಲು ಮುಟ್ಟಿದೆ.

ಮಂಡ್ಯ ಜಿಲ್ಲೆಯ  ಬೆಟ್ಟದ ಹೊಸೂರು ಕ್ಷೇತ್ರದಲ್ಲಿ ಉದ್ಭವ ಬೋಳಾರೆ ರಂಗನಾಥ ಸ್ವಾಮಿಯವರ ಬ್ರಹ್ಮ ರಥೋತ್ಸವದ ಸಂಭ್ರಮ ಕಳೆಗಟ್ಟಿದೆ. ಮುಗಿಲು ಮುಟ್ಟಿದ ಜಯಘೋಷಗಳೊಂದಿಗೆ ಸಹಸ್ರಾರು ಭಕ್ತರು ದರ್ಶನಕ್ಕೆ ಮುಂದಾಗುತ್ತಿದ್ದಾರೆ.  

ಮಂಡ್ಯ ಕೆ.ಆರ್.ಪೇಟೆ ಬೆಟ್ಟದ ಹೊಸೂರು ಗ್ರಾಮದ ಶ್ರೀ ಉದ್ಭವ ಬೋಳಾರೆ ರಂಗನಾಥಸ್ವಾಮಿ ಯವರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ರಥೋತ್ಸವದಲ್ಲಿ ಭಾಗವಹಿಸಿದ್ದರು. ಸಾಂಪ್ರದಾಯಿಕ ಪೂಜೆಯನ್ನು ಉತ್ಸವಮೂರ್ತಿಗೆ ಸಲ್ಲಿಸಿ ರಥೋತ್ಸವಕ್ಕೆ ತಹಶೀಲ್ದಾರ್ ಎಂ. ಶಿವಮೂರ್ತಿ ಚಾಲನೆ ನೀಡಿದರು. ಉಘೇ ಉಘೇ ರಂಗನಾಥ, ಉಘೇ ವೆಂಕಟರಮಣ, ಗೋವಿಂದ, ಗೋವಿಂದ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು.

ಇದೇ ಸಂದರ್ಭದಲ್ಲಿ ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ ಅವರು ಬರೆದಿರುವ ಬೆಟ್ಟದಹೊಸೂರಿನ  ಶ್ರೀ ಬೋಳಾರೆ ರಂಗನಾಥ ಸ್ವಾಮಿ ಕ್ಷೇತ್ರದರ್ಶನ ಕೃತಿಯನ್ನು ಚಂದ್ರಶೇಖರ್ ಬಿಡುಗಡೆಗೊಳಿಸಿದರು. ಚಿಕ್ಕ ತಿರುಪತಿಯೆಂದೇ ಪ್ರಖ್ಯಾತವಾಗುತ್ತಿರುವ ಬೆಟ್ಟದ ಹೊಸೂರು ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ