ಮಹಾಶಿವರಾತ್ರಿಯಂದು ರಥೋತ್ಸವ ನಡೆಯುವುದು ಎಲ್ಲಿ?

ಮಂಗಳವಾರ, 5 ಮಾರ್ಚ್ 2019 (14:51 IST)
ಮಹಾಶಿವರಾತ್ರಿಯಂದು ಇಡೀ ದೇಶಕ್ಕೆ ದೇಶದ ಜನರೇ ಶಿವನಧ್ಯಾನದಲ್ಲಿ ತೊಡಗಿರುತ್ತಾರೆ. ಆದರೆ ಆ ಊರಿನ ಜನರು ಮಾತ್ರ ರಥೋತ್ಸವ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶನ ಮಾಡ್ತಾನೆ ಬರ್ತಿದ್ದಾರೆ.

ಪ್ರಸಿದ್ಧ ಯಾತ್ರಾಸ್ಥಳ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ರಾಜ್ಯ ಹಾಗೂ ತಮಿಳುನಾಡಿನ ಮೂಲೆಮೂಲೆಗಳಿಂದ ಭಕ್ತ ಸಾಗರವೇ ಹರಿದುಬರುತ್ತಿದೆ.
ಕಾಲ್ನಡಿಗೆ ಮೂಲಕವೇ ಸಹಸ್ರಾರು ಮಂದಿ ಭಕ್ತಾದಿಗಳು ಬೆಟ್ಟಕ್ಕೆ ಬಂದಿದ್ದು ಮಾದಪ್ಪನಿಗೆ  ಹರಕೆ ಸೇರಿದಂತೆ ವಿವಿಧ ಪೂಜಾ ಕೈಕಾರ್ಯಗಳನ್ನ ನೆರವೇರಿಸಿದರು.
ಹರಕೆ ಹೊತ್ತ ಭಕ್ತರು ಹುಲಿವಾಹನ, ರುದ್ರಾಕ್ಷಿ ಮಂಟೋಪತ್ಸವ, ಬಸವ ವಾಹನ, ಬೆಳ್ಳಿ ರಥೋತ್ಸವ, ಬಂಗಾರದ ರಥೋತ್ಸವ, ಪಂಜಿನ ಸೇವೆ,ಮುಡಿಸೇವೆ ಉರುಳುಸೇವೆ ಮಾಡಿ ಮಾದಪ್ಪನಿಗೆ ಭಕ್ತಿ ಸಮರ್ಪಿಸಿದರು.

ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ  ಕೆ.ಎಸ್.ಅರ್.ಟಿ.ಸಿ ವತಿಯಿಂದ ರಾಮನಗರ,ಮಂಡ್ಯ, ಮೈಸೂರು. ಚಾಮರಾಜನಗರ ಗುಂಡ್ಲುಪೇಟೆ ಘಟಕದಿಂದ ಸುಮಾರು ಸಾವಿರಕ್ಕೂ ಹೆಚ್ಚು ಬಸ್ ವ್ಯವಸ್ಥೆ  ಮಾಡಲಾಗಿದೆ.  
ಬೆಟ್ಟದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಹಾ ಶಿವರಾತ್ರಿಯ ಅಂಗವಾಗಿ ನಾಳೆ ರಥೋತ್ಸವ ನಡೆಯಲಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ