ಹಾಳಾಗಿದ್ದ ಬಸ್ ತಂಗುದಾಣಕ್ಕೆ ಜೀವ ಕಳೆ..!
ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೇಶವಾಪುರದ ಸರ್ಕಾರಿ ಬಸ್ ನಿಲ್ದಾಣ ಸುಮಾರು ವರ್ಷಗಳಿಂದ ನಿರ್ವಹಣೆ ಇಲ್ಲದೆ ದುಃಸ್ಥಿತಿಗೆ ತಲುಪಿತ್ತು. ಇದನ್ನು ಗಮನಿಸಿದ ಸ್ಥಳೀಯ ಭಗತ್ ಸಿಂಗ್ ಸೇವಾ ಸಂಸ್ಥೆಯ ವಿಶಾಲ್ ಜಾಧವ್ ಹಾಗು ಹತ್ತಾರು ಸ್ಥಳೀಯ ಯುವಕರು ಸೇರಿ ಬಸ್ ನಿಲ್ದಾಣಕ್ಕೆ ಮರು ಜೀವ ನೀಡಿದ್ದಾರೆ . ಹಳದಿ ಕೆಂಪು ಬಣ್ಣ ಬಳಿದು ಬಸ್ ನಿಲ್ದಾಣವನ್ನು ಶುಭ್ರವಾಗಿರಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಯುವಕರ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದು, ಸಂಘ ಸಂಸ್ಥೆಗಳು ಇದೆ ರೀತಿಯಾಗಿ ಮಾಡಬೇಕು ಎಂದು ಹಾರೈಸಿದ್ದಾರೆ.