
ವ್ಯಕ್ತಿಯೊಬ್ಬನ ಕಣ್ಣುಗಳನ್ನು ಕಿತ್ತು ಹಾಕಿ ಕೊಲೆ ಮಾಡಿದ ಬಳಿಕ ಆತನ ದೇಹವನ್ನು ನೇಣಿಗೆ ಹಾಕಿದ ಕ್ರೂರ ಘಟನೆ ನಡೆದಿದೆ.
	 
	ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದ ರವಿ ಎಂಬಾತನನ್ನು ಆತನ ಮನೆಯಲ್ಲೇ ಭೀಕರವಾಗಿ ಕೊಲೆ ಮಾಡಲಾಗಿದ್ದು, ಕೊಲೆ ಬಳಿಕ ಆತ್ಮಹತ್ಯೆಎಂಬಂತೆ ಬಿಂಬಿಸೋಕೆ ಯತ್ನಿಸಲಾಗಿದೆ. 
	ಭೋಪಾಲ್ ನ ಮನಪುರದಲ್ಲಿ ಘಟನೆ ನಡೆದಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ರವಿ ವಾಸವಾಗಿದ್ದನು. ಕೊಲೆ ನಡೆದ ದಿನ ಪತ್ನಿ ಹಾಗೂ ಮಕ್ಕಳು ಬೇರೆಯವರ ಮನೆಗೆ ಹೋಗಿದ್ದರು. ಮೇಲ್ನೋಟಕ್ಕೆ ಮೃತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರೋ ವ್ಯಕ್ತಿಯೇ ಈ ರೀತಿ ಅಮಾನುಷವಾಗಿ ಕೊಲೆ ಮಾಡಿರಬಹುದು ಅಂತ ಶಂಕೆ ವ್ಯಕ್ತಪಡಿಸಲಾಗಿದೆ. 
 
		
