ನೈಟ್ ಡ್ಯೂಟಿ ಮಾಡುತ್ತಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೀನಾಕ್ಷಿ ಸೈನಿ (31) ವೃತ್ತಿಯಲ್ಲಿ ನರ್ಸ್ ಆಗಿದ್ದು, ನೈಟ್ ಡ್ಯೂಟಿ ಮಾಡೋವಾಗ ಇವಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಮೀನಾಕ್ಷಿ ಸೈನಿ ತಾನು ಕೆಲಸ ಮಾಡುತ್ತಿದ್ದ ಹೆಲ್ತ್ ಸೆಂಟರ್ ನಲ್ಲಿ ಸಹೋದ್ಯೋಗಿಯಾಗಿದ್ದ ಅಜಯ್ ಎಂಬಾತನ ಜೊತೆ ಸಲುಗೆಯಿಂದ ಇದ್ದಳು. ಈಕೆಯ ಗಂಡ ವಿದೇಶದಲ್ಲಿದ್ದನು.
ಅಜಯ್ ಹಾಗೂ ಮೃತಳ ನಡುವೆ ಅನೈತಿಕ ಸಂಬಂಧದಿಂದಲೇ ಈ ಸಾವು ಸಂಭವಿಸಿದೆಯಾ ಅನ್ನೋ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗ್ತಿದೆ.
ಅಂದ್ಹಾಗೆ ಹರಿಯಾಣದ ಅಂಬಾಲಾದಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಅಜಯ್ ನನ್ನು ಬಂಧನ ಮಾಡಿದ್ದಾರೆ.