ಕಾರಿನ ಗಾಜು ಒಡೆದು ಲಕ್ಷ ಲಕ್ಷ ಹಣ ಎಗರಿಸಿದ್ರು
ಲಕ್ಷ ಲಕ್ಷ ಹಣವನ್ನು ಚಾಲಾಕಿ ಕಳ್ಳರು ತಮ್ಮ ಕೈಚಳಕ ತೋರುವ ಮೂಲಕ ಎಗರಿಸಿರುವ ಘಟನೆ ನಡೆದಿದೆ.
ಮನೆ ಮಾರಾಟ ಮಾಡಿ ಬಂದ ಹಣವನ್ನು ಪಡೆದು ಕಾರಿನಲ್ಲಿ ಇಡಲಾಗಿತ್ತು. ಇದನ್ನೇ ಅವಕಾಶವಾಗಿ ಬಳಸಿಕೊಂಡ ಖದೀಮರು ಕಾರಿನ ಗಾಜು ಒಡೆದು 9 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದಾರೆ. ಆನೇಕಲ್ ನ ಉಪ ನೋಂದಣಾಧಿಕಾರಿ ಕಚೇರಿ ಬಳಿ ಘಟನೆ ನಡೆದಿದೆ.
ದಿನಕರ್ ಎಂಬುವವರಿಗೆ ಸೇರಿದ ಹಣವನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಜೆಪಿ ನಗರದ ನಿವಾಸಿ ದಿನಕರ್, ಬನಹಳ್ಳಿಯಲ್ಲಿರುವ ಮನೆಯನ್ನು ಮಾರಾಟ ಮಾಡಿದ್ದರು. ಆ ಹಣವನ್ನು ಕಾರಿನಲ್ಲಿ ಇಟ್ಟಿದ್ದರು.
ಈ ವೇಳೆ ಕಾರಿನ ಗಾಜನ್ನು ಒಡೆದು 9 ಲಕ್ಷ ಕಳವು ಮಾಡಲಾಗಿದೆ. ಈ ಕುರಿತು ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.