ಬೂಸ್ಟರ್ ಡೋಸ್ ಬಗ್ಗೆ ಕೇಂದ್ರದ ತೀರ್ಮಾನ ಸ್ಪಷ್ಟವಾಗಿಲ್ಲ: ಸಿಎಂ
ಶುಕ್ರವಾರ, 3 ಡಿಸೆಂಬರ್ 2021 (10:54 IST)
ನವದೆಹಲಿ : ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ ಭೇಟಿಯಾಗಿ ಕೊರೊನಾ ನಿರ್ವಹಣೆ ಬಗ್ಗೆ ಚರ್ಚೆ ಮಾಡಿದ್ದೇನೆ.
ಕೊರೊನಾ ನಿರ್ವಹಣೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ವ್ಯಾಕ್ಸಿನೇಷನ್ ಹೆಚ್ಚು ಮಾಡಲು ಸೂಚಿಸಿದ್ದಾರೆ. ಬೂಸ್ಟರ್ ಡೋಸ್ ಬಗ್ಗೆ ಕೇಂದ್ರದ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರ ಭೇಟಿ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೇಂದ್ರ ನಾಯಕ ಭೇಟಿ ಬಳಿಕ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇಬ್ಬರು ಕರ್ನಾಟಕದವರು ಎಂದಿದ್ದಾರೆ. ಹೊಸ ತಳಿಗಳ ಬಗ್ಗೆ, ತಡೆಗಟ್ಟುವ ಬಗ್ಗೆ ನಾಳೆ ತುರ್ತುಸಭೆ ಕರೆಯಲಾಗಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಸಭೆ ನಡೆಯಲಿದೆ. ಕೇಂದ್ರದ ಪ್ರಮುಖರು, ತಜ್ಞರ ಜೊತೆ ಚರ್ಚೆ ಮಾಡಬೇಕಿದೆ. ವರದಿ ಬಂದ ಬಳಿಕವೂ ಮತ್ತೆ ಕೇಂದ್ರ ಆರೋಗ್ಯ ಸಚಿವರು ಭೇಟಿ ಮಾಡಿ ಮಾಹಿತಿಗಳನ್ನು ನಾಳೆ ಶೇರ್ ಮಾಡುವುದಾಗಿ ಹೇಳಿದ್ದಾರೆ. ಈಗ ಕೇವಲ ಮಾಹಿತಿ ರವಾನೆ ಆಗಿದೆ.
ಪೂರ್ಣ ವರದಿ ಬಂದ ಬಳಿಕ ಎಲ್ಲಾ ವಿಚಾರ ಲಭ್ಯವಾಗಲಿದೆ. ವಿಮಾನ ನಿಲ್ದಾಣ ಪರೀಕ್ಷೆ, ಕ್ವಾರಂಟೈನ್ ಬಗ್ಗೆ ಹೆಚ್ಚು ತಿಳಿಯುವ ಅವಶ್ಯಕತೆ ಇದೆ ನಾಳೆ ತಜ್ಞರ ಜೊತೆ ಮಾತನಾಡಿ ತೀರ್ಮಾನ ಮಾಡಲಾಗುತ್ತೆ ಎಂದರು.