ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆಯೇ ಕಗ್ಗಾಂಟು

ಮಂಗಳವಾರ, 16 ಮೇ 2023 (18:50 IST)
ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಬಂದ್ರು ಇನ್ನೂ ಸಿಎಂ ಆಯ್ಕೆಯೇ ಕಗ್ಗಾಂಟಾಗಿ ಉಳಿದಿದೆ. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಗದ್ದುಗೆ ಗುದ್ದಾಟ ದೆಹಲಿ ತಲುಪಿದ್ದು.‌ಈ‌ಮಧ್ಯೆ ಸಚಿವ ಸ್ಥಾನಕ್ಕೂ ಭರ್ಜರಿ ಲಾಭಿ ಶುರುವಾಗಿದೆ. ಮೊದಲ ಬಾರಿಗೆ ಬಿಜೆಪಿ ಭದ್ರ ಕೋಟೆ ಕೊಡಗಿನ‌ವೀರಾಜಪೇಟೆಯನ್ನ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿದ್ದ  ಎ ಎಸ್ ಪೊನ್ನಣ್ಣ ಭೇದಿಸಿ ಕಾಂಗ್ರೆಸ್ ಬಾವೂಟ ಹಾರಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರೋ ಪೊನ್ನಣ್ಣರನ್ನ ಸಂಪುಟಕ್ಕೆ ಆಯ್ಕೆ ಮಾಡಿ ಕಾನೂನು ಮತ್ತು ಸಂಸಧೀಯ ವ್ಯವಹಾರ ಖಾತೆ ನೀಡುವಂತೆ ಕಾಂಗ್ರೆಸ್ ನ ಕಾನೂನು ಘಟನೆ ಕೆಪಿಸಿಸಿಗೆ ಮನವಿ ಸಲ್ಲಿಸಿದೆ. ಇಂದು ಕಾನೂನು ಘಟಕ, ಮಾನವಹಕ್ಕುಗಳ ಪದಾದಿಕಾರಿಗಳು ಹಾಗೂ  ಮುಖಂಡರು ಸಭೆ ನಡೆಸಿ ಪೊನ್ನಣ್ಣರನ್ನ ಕಾನೂನು ಮಂತ್ರಿ ಮಾಡುವಂತೆ ಒಕ್ಕರೊಲಿನ ನಿರ್ಧಾರ ಮಾಡಿ ಸಹಿ‌ಸಂಗ್ರಹಣೆ ಮೂಲಕ ಕೆಪಿಸಿಸಿ ಮೇಲೆ ಒತ್ತಡ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರದಿಂದ ನಡೆಮಕವಾಗೋ ವಕೀಲರ ನೇಮಕಾತಿಯನ್ನು ಕಾನೂನು ಘಟಕ ಅಂಗಳಕ್ಕೆ ತಂದು ಚರ್ಚಿಸ ಬೇಕು ಕಳೆದ ನಾಲ್ಕು ರ್ಷದಿಂದ‌ ಕಾನೂನು ಘಟಕ ಪಕ್ಷಕ್ಕಾಗಿ ಕೆಲಸ ಮಾಡಿದೆ.‌ ಈ ಕಾರಣದಿಂಸ ಪೊನ್ನಣ್ಣರನ್ನ ಸಿಎಂ ಪ್ರಮಾಣ ವಚನ ಸ್ವೀಕರಿಸೋ ದಿನದಂದೆ ಮಂತ್ರಿ ಮಾಡುವಂತೆ ಆಗ್ರಹಿಸಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ