ಚಳಿಗಾಲ ಅಧಿವೇಶನಕ್ಕೂ ಮುನ್ನ ದೇವರ ಮೊರೆ ಹೋದ ಸಿಎಂ

ಶುಕ್ರವಾರ, 7 ಡಿಸೆಂಬರ್ 2018 (16:54 IST)
ಚಳಿಗಾಲ ಅಧಿವೇಶನ ಸುಸೂತ್ರವಾಗಿ ಸಾಗಬೇಕು ಎಂದು ಮುಖ್ಯಮಂತ್ರಿಗಳು ದೇವರ ಮೊರೆ ಹೋಗಿದ್ದಾರೆ.
ಚಳಿಗಾಲ ಅಧಿವೇಶನ ನಡೆಯಲು ಕ್ಷಣಗಣನೆ ಆರಂಭಗೊಂಡಿರುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ.

ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಸಿಎಂ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ಅಧಿವೇಶನ ಸುಸೂತ್ರವಾಗಿ ನಡೆಯಬೇಕು ಎಂದು ತಾಯಿಯ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಸಿಎಂ ಹೇಳಿದರು.

ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯರೂಪ್ಪ ಕೇರಳ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಿಎಂ, ನಾವು ಆ ಉದ್ದೇಶದಿಂದ ಯಾಗ ನಡೆಸುತ್ತಿಲ್ಲ. ಮೊದಲಿನಿಂದಲೂ ನಾವು ದೇವಸ್ಥಾನಕ್ಕೆ ಬರುತ್ತಿದ್ದೇವೆ. ನಾವೇನು ಕದ್ದು ಮುಚ್ಚಿ ಯಾಗ ಮಾಡಿಸುವುದಿಲ್ಲ. ವಾಮಾಚಾರ ಮಾಡಿಸುವುದಿಲ್ಲ. ನಾವು ದೇವರನ್ನು ನಂಬಿದ್ದೇವೆ, ಪ್ರಾರ್ಥನೆ ಸಲಿಸುತ್ತೇವೆ ಎಂದರು.

ಇನ್ನು ಮಗ ಸಿಖಿಲ್ ಕುಮಾರಸ್ವಾಮಿ ಮದುವೆ ಕುರಿತು ಮಾತನಾಡಿದ ಸಿಎಂ, ಗುರುಗಳ ಆಶೀರ್ವಾದ ಎಲ್ಲದಕ್ಕೂ ಇರಬೇಕಲ್ಲ ?. ಮಗ ನಿಖಲ್ ಕುಮಾರಸ್ವಾಮಿ‌ ಮದುವೆ ವಿಷಯದ ಬಗ್ಗೆಯೂ ಗುರುಗಳ ಜತೆ ಚರ್ಚೆ ಮಾಡಲಾಗುವುದು ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ