ಪರಿಷತ್ ಸಭಾಪತಿ ಸ್ಥಾನಕ್ಕೆ ಒಮ್ಮತದ ಆಯ್ಕೆ ಸೂಕ್ತ: ವೈ.ಎಸ್.ದತ್ತಾ

ಶುಕ್ರವಾರ, 24 ಜೂನ್ 2016 (13:41 IST)
ವಿಧಾನ ಪರಿಷತ್ ಸಭಾಪತಿಯಾಗಿ ಒಮ್ಮತದಿಂದ ಆಯ್ಕೆ ಮಾಡುವಂತೆ ಜೆಡಿಎಸ್ ಪಕ್ಷದ ಪರವಾಗಿ ಮನವಿ ಮಾಡುವುದಾಗಿ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ಹೇಳಿದ್ದಾರೆ.
 
ವಿಧಾನಪರಿಷತ್ ಸಭಾಪತಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ , ಕಾಂಗ್ರೆಸ್ ಜೆಡಿಎಸ್ ಹೆಸರನ್ನು ಬಳಸಿಕೊಳ್ಳುತ್ತಿವೆ. ಸಭಾಪತಿ ಚುನಾವಣೆಯಲ್ಲಿ ರಾಜ್ಯಸಭೆ ಚುನಾವಣೆಯ ಕಹಿ ಅನುಭವ ಮರೆಯೋಣ ಎಂದು ತಿಳಿಸಿದ್ದಾರೆ.
 
ವಿಧಾನಸಭೆ ಸಭಾಧ್ಯಕ್ಷ ಸ್ಥಾನ ಅಡಳಿತ ಪಕ್ಷಕ್ಕೆ ನೀಡಲಾಗುತ್ತದೆ. ಅದರಂತೆ ಸಭಾಪತಿ ಸ್ಥಾನ ಪ್ರತಿಪಕ್ಷಕ್ಕೆ ನೀಡಲಾಗುತ್ತದೆ. ಇಂತಹ ಒಪ್ಪಂದದಿಂದ ಸರಕಾರ ಮತ್ತು ಪ್ರತಿಪಕ್ಷಗಳ ನಡುವಿನ ಸಾಮರಸ್ಯತೆಗೆ ನಾಂದಿಯಾಗುತ್ತದೆ ಎಂದು ಹೇಳಿದ್ದಾರೆ.
 
ಕಾಂಗ್ರೆಸ್, ಬಿಜೆಪಿ ಅಂಕಿಸಂಖ್ಯೆಗಳ ಕಸರತ್ತು ಬಿಡಬೇಕು. ಏಳು ಬಾರಿ ಆಯ್ಕೆಯಾಗಿರುವ ಬಸವರಾಜ್ ಹೊರಟ್ಟಿಯವರನ್ನು ಸಭಾಪತಿ ಸ್ಥಾನಕ್ಕೆ ಒಮ್ಮತದಿಂದ ಆಯ್ಕೆ ಮಾಡೋಣ ಎಂದು ಬಿಜೆಪಿ , ಕಾಂಗ್ರೆಸ್ ಪಕ್ಷದ ನಾಯಕರುಗಳಿಗೆ ಜೆಡಿಎಸ್ ಮುಖಂಡ ವೈ.ಎಸ್.ದತ್ತಾ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ