ಡಿಸೆಂಬರ್ 8ರ ರಾತ್ರಿ 11 ಗಂಟೆ ಸುಮಾರಿಗೆ ಮಾನ್ಯತಾ ಟೆಕ್ಪಾರ್ಕ್ ಬಳಿ ತನ್ನ ಪತ್ನಿಯೊಂದಿಗೆ ನಡೆದುಕೊಂಡು ಬರುತ್ತಿದ್ದ ಕಾರ್ತಿಕ್ ಎಂಬಾತನನ್ನ ತಡೆದಿದ್ದ ಹೊಯ್ಸಳ ಸಿಬ್ಬಂದಿ, ಆಧಾರ್ ಕಾರ್ಡ್ ಸೇರಿದಂತೆ ಐಡೆಂಟಿಟಿ ದಾಖಲೆಗಳನ್ನ ಪರಿಶೀಲಿಸಿದ್ದರು. 'ಮನೆಯ ಸಮೀಪದಲ್ಲೇ ಇದ್ದೇವೆ, ಮೇಲಾಗಿ 11 ಗಂಟೆಯ ಸುಮಾರಿಗೆ ಓಡಾಟಕ್ಕೆ ನಿರ್ಬಂಧವಿದೆಯೇ?' ಎಂದು ಪ್ರಶ್ನಿಸಿದಾಗ, 3 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡುವುದಿಲ್ಲ ಎಂದಾಗ ಬೆದರಿಕೆ ಹಾಕಿ, 1 ಸಾವಿರ ರೂಗಳನ್ನ ಡಿಜಿಟಲ್ ಪೇಮೆಂಟ್ ಮೂಲಕ ಪಡೆದು ಸ್ಥಳದಿಂದ ತೆರಳಿದ್ದರು. ಹೊಯ್ಸಳ ಸಿಬ್ಬಂದಿಗಳ ನಡೆಯ ಕುರಿತು ಟ್ವೀಟ್ ಮಾಡಿದ್ದ ಕಾರ್ತಿಕ್, ತಮಗಾದ ಅನುಭವ ಹಂಚಿಕೊಂಡಿದ್ದರು. ಬಳಿಕ ಇಬ್ಬರೂ ಸಿಬ್ಬಂದಿಯನ್ನ ಅಮಾನತ್ತುಗೊಳಿಸಿ ಆದೇಶಿಸಿದ್ದ ಈಶಾನ್ಯ ವಿಭಾಗದ ಡಿಸಿಪಿ ಇಲಾಖಾ ತನಿಖೆಗೆ ಆದೇಶಿಸಿದ್ದರು.