ಈ ಜಿಲ್ಲೆಗೂ ಕಾಲು ಇಟ್ಟೆಬಿಡ್ತು ಕೊರೊನಾ ವೈರಸ್

ಮಂಗಳವಾರ, 7 ಏಪ್ರಿಲ್ 2020 (20:18 IST)
ರಾಜ್ಯದ ಈ ಜಿಲ್ಲೆಯಲ್ಲಿಯೂ ಕೊರೊನಾ ವೈರಸ್ ಮಹಾಮಾರಿ ಕಾಣಿಸಿಕೊಂಡಿದೆ.

ಗದಗ ಜಿಲ್ಲೆಗೆ ಕೊರೊನಾ ವೈರಸ್ ಕಾಲಿಟ್ಟಿದ್ದು, ಜನರು ಆತಂಕಗೊಂಡಿದ್ದಾರೆ. ಗದಗ- ಬೆಟಗೇರಿ ನಗರಸಭೆ 31 ನೇ ವಾಡಿ೯ನ ರ೦ಗನವಾಡ ಪ್ರದೇಶದ ನಿವಾಸಿ 80 ವಷ೯ದ ವೃದ್ಧೆಗೆ ಕೊರೊನಾ ಸೋ೦ಕು ತಗುಲಿದ್ದು ದೃಢ ಪಟ್ಟಿದೆ ಎ೦ದು ಗದಗ ಜಿಲ್ಲಾಧಿಕಾರಿ ಎ೦. ಜಿ. ಹಿರೇಮಠ ತಿಳಿಸಿದ್ದಾರೆ.

 ಉಸಿರಾಟದ ತೀವ್ರ ತೊ೦ದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈ ಮಹಿಳೆಯನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಅವರ ಮಾದರಿಗಳನ್ನು ತಪಾಸಣೆಗೆ ಕಳುಹಿಸಲಾಗಿತ್ತು.

ಸರಕಾರ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ಗದಗ ನಗರದ   80 ವಷ೯ದ ಮಹಿಳೆಗೆ (ಪಿ 166) ಕೋರೊನಾ ಸೋಂಕು ತಗುಲಿದೆ ಎ೦ದು ಷೋಷಣೆಯಾಗಿದೆ ಎ೦ದು ಗದಗ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೋರೊನಾ ಸೋಂಕು ದೃಢ ಪಟ್ಟ ಹಿನ್ನಲೆಯಲ್ಲಿ ಗದಗ ನಗರದ ವಾಡ೯ 31 ನ್ನು ನಿಭ೯೦ದಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ