ಬೃಹತ್ ಲಸಿಕಾ ದಾಖಲೆಯಿಂದ ವಿಪಕ್ಷಗಳಿಗೆ ಜ್ವರ ಶುರುವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಒಂದೇ ದಿನ 2.5 ಕೋಟಿ ವ್ಯಾಕ್ಸಿನೇಷನ್ ಗುರಿ ಹೊಂದಿದ್ದ ಕೇಂದ್ರ ಸರ್ಕಾರ ಅದನ್ನ ಸಾಧಿಸುವಲ್ಲಿ ಸಫಲವಾಗಿದೆ. ಇನ್ನು ವಿಶ್ವದ ಅತಿದೊಡ್ಡ ಮತ್ತು ವೇಗವಾದ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಗೋವಾ ಪ್ರಮುಖ ಪಾತ್ರವಹಿಸಿದ ಬೆನ್ನಲ್ಲೆ ಗೋವಾದ ಪ್ರಮುಖ ಆರೋಗ್ಯ ಕಾರ್ಯಕರ್ತರೊಂದಿಗಿನ ನಡೆಸಿದ ಸಂವಾದ ನಡೆಸಿದ ಮೋದಿ, ನಾನು ವಿಗ್ಱಆನಿ ಅಲ್ಲ ವೈದ್ಯನು ಅಲ್ಲ ಆದ್ರೆ ವ್ಯಾಕ್ಸಿನೇಷನ್ ನಿಂದ ಯಾವ ಅಡ್ಡ ಪರಿಣಾಮ ಆಗಲ್ಲ ಎಂದು ಹೇಳಿದ್ರು.