ಬೆಂಗಳೂರು : ಇಂದು ಸೂರ್ಯಗ್ರಹಣದ ಹಿನ್ನಲೆಯಲ್ಲಿ ನಭೋಮಂಡಲದಲ್ಲಿ ವಿಸ್ಮಯ ನಡೆಯಲಿದ್ದು, ಕಂಕಣ ಆಕೃತಿಯಲ್ಲಿ ಸೂರ್ಯ ಕಂಗೊಳಿಸಲಿದೆ.
18 ವರ್ಷಗಳ ನಂತರ ಈ ಗ್ರಹಣ ಗೋಚರವಾಗಿದ್ದು, ಇದು ಈ ವರ್ಷದ ಮೊದಲ ಸೂರ್ಯಗ್ರಹಣವಾಗಿದೆ. ವಿಶ್ವದ 23 ದೇಶಗಳಲ್ಲಿ ಈ ಗ್ರಹಣ ಗೋಚರವಾಗಲಿದೆ.
ರಾಜ್ಯದಲ್ಲೂ ಸೂರ್ಯ ಗ್ರಹಣ ಗೋಚರಿಸಲಿದ್ದು, ಬೆಳಿಗ್ಗೆ 10.13ಕ್ಕೆ ಗ್ರಹಣ ಸ್ಪರ್ಶ, ಬೆಳಿಗ್ಗೆ 11.47 ಕ್ಕೆ ಗ್ರಹಣ ಮಧ್ಯಕಾಲ, ಮಧ್ಯಾಹ್ನ 12ಕ್ಕೆ 40% ಗ್ರಹಣ ಗೋಚರವಾಗಲಿದೆ. ಮಧ್ಯಾಹ್ನ 1.31ಕ್ಕೆ ಗ್ರಹಣ ಮೋಕ್ಷ ಕಾಲ.