ರಾಜ್ಯ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲೂ ಬ್ಯಾಲೇಟ್ ಪೇಪರ್ ವೋಟಿಂಗ್ ನ್ನ 80 ವರ್ಷ ಮೇಲ್ಪಟ್ಟ ವೃದ್ಧರು ವಿಕಲಚೇತನರಿಗೆ ಹಾಗೂ ಚುನಾವಣೆಯಲ್ಲಿ ಭಾಗವಹಿಸೋ ಪೊಲೀಸ್ , ಸಿಬ್ಬಂದಿಗಳಿಗೆ ನಾಳೆಯಿಂದ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ.80 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಮನೆ ಬಳಿಯೇ ವೋಟಿಂಗ್ ವ್ಯವಸ್ಥೆಯನ್ನ ಚುನಾವಣಾ ಅಯೋಗದ ಸಿಬ್ಬಂದಿಗಳಿಂದ 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆ ಬಳಿ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಗೌಪ್ಯವಾಗಿ ಮತ ಚಲಾವಣೆಗೆ ಅವಕಾಶ ಮಾಡಿಕೊಟ್ಟಿದೆ.
ಗೌಪ್ಯ ಮತ ಚಾಲಯಿಸುವಾಗ ಚುನಾವಣಾ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸ್ರು ಹಾಜರಿದ್ದು,ಮನೆಯಲ್ಲೇ ಮತದಾನ ಮಾಡುವಾಗ ವಿಡಿಯೋ ರೇಕಾರ್ಡಿಂಗ್ ಮತದಾನದ ನಂತರ ಸ್ಟ್ರಾಂಗ್ ರೂಮ್ ಗೆ ಮತ ಪೆಟ್ಟಿಗೆ ಶಿಪ್ಟ್ ಮಾಡಲಾಗಿದೆ.ಇನ್ನೂ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸೋ ಸಿಬ್ಬಂದಿಗಳಿಗೆ ಹಾಗೂ ಪೊಲೀಸ್ರಿಗೆ ಬ್ಯಾಲೆಟ್ ಮತದಾನದ ವ್ಯವಸ್ಥೆ ಇದ್ದು,ಇವರು ಕೂಡ ನಾಳೆಯಿಂದ ಬ್ಯಾಲೇಟ್ ಪೇಪರ್ ಮೂಲಕ ಮತದಾನ ಮಾಡಬಹುದು.ಎಲ್ಲಾ ಮತಗಳನ್ನ ಮೇ 13 ರಂದು ಮತ ಎಣಿಕೆ ದಿನ ಓಪನ್ ಮಾಡಲಾಗುವುದು.ಬೆಂಗಳೂರಿನ 80 ವರ್ಷ ಮೇಲ್ಪಟ್ಟ ಮತದಾರರು ಕೇಂದ್ರ ವಲಯದಲ್ಲಿ 1995,ಉತ್ತರ 2298,ದಕ್ಷಿಣ 2530,ಬೆಂಗಳೂರು ಗ್ರಾಮಾಂತರ 2329,ಒಟ್ಟು 9152 ಮತದಾರರಿದ್ದಾರೆ.