ಪ್ರಿಯಕರನ ವರದಕ್ಷಿಣೆ ಬೇಡಿಕೆಗೆ ವೈದ್ಯೆ ಬದುಕು ಅಂತ್ಯ!
ಕೇರಳದ ತಿರುವನಂತಪುರಂದಲ್ಲಿ ವೈದ್ಯೆಯೊಬ್ಬಳು ದುರಂತ ಅಂತ್ಯಕಂಡಿದ್ದಾಳೆ. ಎಲ್ಲರನ್ನೂ ಒಪ್ಪಿಸಿ ಮದುವೆಗೆ ಸಜ್ಜಾದ ವೈದ್ಯೆಗೆ ಮದುವೆಯಾಗಲು ತನ್ನ ಪ್ರಿಯಕರ 15 ಏಕರೆ ಜಮೀನು, 150 ಪವನ್ ಚಿನ್ನ ಹಾಗೂ BMW ಕಾರು ನೀಡುವಂತೆ ವರದಕ್ಷಿಣ ಬೇಡಿಕೆ ಇಟ್ಟಿದ್ದಾನೆ.
ಈ ಬೇಡಿಕೆ ಪೂರೈಸಲು ಸಾಧ್ಯವಾಗದ ಕಾರಣ ಅಂತಿಮ ಹಂತದಲ್ಲಿ ಮದುವೆಯನ್ನು ರದ್ದು ಮಾಡಿದ್ದಾರೆ. ಆದರೆ ಈ ಆಘಾತದಿಂದ ವೈದ್ಯೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.