ರಾಸಾಯನಿಕ ಸೋರಿಕೆಯಾಗಿ ಇಡೀ ಗೋಡೌನ್‌ಗೆ ಬೆಂಕಿ, ಮೂವರು ಕಾರ್ಮಿಕರು ದುರ್ಮರಣ

Sampriya

ಶನಿವಾರ, 9 ನವೆಂಬರ್ 2024 (15:41 IST)
Photo Courtesy X
ಗುಜರಾತ್‌: ಇಲ್ಲಿನ ನವಸಾರಿ ಗೋಡೌನ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸ್ಥಳೀಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ತಂಡಗಳು ಬೆಂಕಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿವೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ನವಸಾರಿಯ ಬಿಲಿಮೋರಾ ಪ್ರದೇಶದ ಸಾರಿಗೆ ಗೋದಾಮಿನಲ್ಲಿ ಶನಿವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ.ಘಟನೆ ಕುರಿತು ಮಾಹಿತಿ ಪಡೆದ ಕೆಲವೇ ಹೊತ್ತಿನಲ್ಲಿ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಗೋಡೌನ್‌ನಲ್ಲಿ ಕಾರ್ಮಿಕರು ಟ್ರಕ್‌ನಿಂದ ರಾಸಾಯನಿಕಗಳನ್ನು ಹೊಂದಿರುವ ಬ್ಯಾರೆಲ್‌ಗಳನ್ನು ಇಳಿಸುತ್ತಿದ್ದಾಗ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಬಿವಿ ಗೋಹಿಲ್ ತಿಳಿಸಿದ್ದಾರೆ.

"ಮೂರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ" ಎಂದು ಅವರು ಹೇಳಿದರು.

ಸಮೀಪದ ತಾಲೂಕುಗಳಿಂದ ಐದು ಅಗ್ನಿಶಾಮಕ ಟೆಂಡರ್‌ಗಳನ್ನು ಸೇವೆಗೆ ಒತ್ತಲಾಗಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಗೋಹಿಲ್ ಹೇಳಿದ್ದಾರೆ.

ಟ್ರಕ್‌ನಲ್ಲಿದ್ದ ಬ್ಯಾರೆಲ್ ಒಂದರಿಂದ ರಾಸಾಯನಿಕಗಳು ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಮ್ಲತಾರ್ ಜಗದೀಶ್ ಚೌಧರಿ ಹೇಳಿದ್ದಾರೆ.

ಟ್ರಕ್‌ಗೆ ಮೊದಲು ಬೆಂಕಿ ಹೊತ್ತಿಕೊಂಡಿತು ಮತ್ತು ಬೆಂಕಿಯು ಗೋಡೌನ್‌ಗೆ ವ್ಯಾಪಿಸಿ ಮೂವರು ಸಾವನ್ನಪ್ಪಿದರು. ಮೂವರು ಕಾರ್ಮಿಕರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಒಬ್ಬರು ಇನ್ನೂ ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು

ಇನ್ನೂ ಗುರುವಾರ ಮುಂಜಾನೆ, ವಲ್ಸಾದ್‌ನ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಅವಘಡ ಸಂಭವಿಸಿದೆ. ಇಂದು ಮುಂಜಾನೆ ಈ ಘಟನೆ ಸಂಭವಿಸಿದ್ದು, ಬೆಂಕಿಯ ಜ್ವಾಲೆಯು ಇಡೀ ಗೋಡೌನ್‌ ಅನ್ನು ಆವರಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ