ಜ್ಯೋತಿಷಿ ಮಾತು ಕೇಳಿ ಹೆಣ್ಣು ಮಗಳನ್ನು ಕೊಂದ ಕಟುಕ ತಂದೆ

ಬುಧವಾರ, 19 ಜೂನ್ 2019 (16:14 IST)
ಜ್ಯೋತಿಷಿಯೊಬ್ಬನ ಮಾತನ್ನು ಕೇಳಿ ತನ್ನ ಹೆಣ್ಣು ಮಗುವನ್ನು ಕಟುಕ ತಂದೆ ಕೊಂದಿರುವ ಘಟನೆ ನಡೆದಿದೆ.

ಕಾಫಿನಾಡಲ್ಲೊಬ್ಬ ಕಟುಕ ತಂದೆ ತನ್ನ ಪೈಶಾಚಿಕ ಕೃತ್ಯ ಮಾಡಿದ್ದಾನೆ.

ಜ್ಯೋತಿಷಿ ಮಾತು ಕೇಳಿ ಮಗುವನ್ನೇ ಕೊಂದಿದ್ದಾನೆ ಅಪ್ಪ. ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್ ನಲ್ಲಿ ಘಟ‌ನೆ ನಡೆದಿದೆ.

ಹೆಣ್ಣು ಮಗು ಎಂಬ ಕಾರಣಕ್ಕೆ ಒಂದೂವರೆ ತಿಂಗಳ ಕಂದನನ್ನ ತಂದೆಯೇ ಕೊಂದಿದ್ದಾನೆ. ಮಂಜುನಾಥ್ ( 27) ಕೊಲೆ ಮಾಡಿದ ಕಟುಕ ತಂದೆ.

ಹೆಣ್ಣು ಮಗು ನಿನ್ನ ಭವಿಷ್ಯಕ್ಕೆ ಕಂಟಕ ಎಂದಿದ್ದನಂತೆ ಜ್ಯೋತಿಷಿ. ಜ್ಯೊತಿಷಿ ಮಾತು ಕೇಳಿ ಕಂದನ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ. ಜ್ಯೋತಿಷಿಗಾಗಿ ಪೊಲೀಸರ ಹುಡುಕಾಟ ನಡೆದಿದೆ. ತಾಯಿ ಇಲ್ಲದ ವೇಳೆ ಮಗುವನ್ನ ಕೊಂದ ಅಪ್ಪ‌, ಮಗುವಿನ ಕುತ್ತಿಗೆಯಲ್ಲಿ ಗಂಭೀರ ಗಾಯ ಮಾಡಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಆರೋಪಿ ಬಂಧನ ಮಾಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ