ಹಿಂದಿನ ಸರಕಾರ ಈಗಾಗಲೇ ಪಠ್ಯ ಬದಲಾವಣೆ ಮಾಡಿದೆ. ಆ ಬಗ್ಗೆ ಸಾಕಷ್ಟು ಗೊಂದಲ ಆಗಿತ್ತು. ಈಗ ಈ ಸರಕಾರವೂ ಅದೇ ದಾರಿಯಲ್ಲಿ ಇದೆ. ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಶಾಲೆಗಳಿಗೆ ಕಳಿಸಲಾಗಿದೆ. ಇದು ಜನರ ದುಡ್ಡಲ್ಲವೇ? ಎಂದು ಅವರು ಹೇಳಿದರು.ಮಕ್ಕಳಿಗೆ ಪರಿಶುದ್ಧ ವಾತಾವರಣ ಸೃಷ್ಟಿ ಮಾಡಬೇಕು. ಮಕ್ಕಳಿಗೆ ಒಳ್ಳೆಯ ಜ್ಞಾನ ತುಂಬಬೇಕು. ದ್ವಂದ್ವ ಹೇಳಿಕೆಗಳನ್ನು ನೀಡುವ ಮೂಲಕ ಅವರ ಮೇಲೆ ಪರಿಣಾಮ ಬೀಳುವಂತೆ ಮಾಡುವುದು ಬೇಡ. ಸರಕಾರದ ಪ್ರಾರಂಭಿಕ ಹಂತದಲ್ಲಿ ಯಾವ ರೀತಿಯ ಗೊಂದಲ ಬಿತ್ತನೆ ಮಾಡಿದರೆ ಹೇಗೆ? ಇನ್ನೂ ಐದು ವರ್ಷದ ಕಥೆ ಏನು? ಎನ್ನುವುದು ನನ್ನ ಪ್ರಶ್ನೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.