ಪಕ್ಷಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರಲ್ಲೂ ಪಕ್ಷಿ ಪ್ರೀಯರಿಗೆ ಅಂತೂ ಪಕ್ಷಿಗಳ ಮೇಲೆ ಎಲ್ಲಿಲ್ಲದ ಪ್ರೀತಿ ಇರುತ್ತೆ. ಅಂದಹಾಗೆ ಹೀಗೆ ಸುಮಾರು ವರ್ಷದಿಂದ ಬೆಂಗಳೂರಿನ ಶಂಕರ್ ಅವರು ಪಾರಿವಾಳ ಸಾಕಿದ್ದಾರೆ. ಹೀಗೆ ಸಾಕುವಾಗ ಆಚಾನಕ್ಕಾಗಿ ಒಂದು ಪರಿವಾಳ ಸಿಗುತ್ತೆ. ಆ ಪರಿವಾಳವನ್ನ ಮನೆಯಲ್ಲಿ ಎಲ್ಲ ಪರಿವಾಳವಂತೆ ಸಾಕುತ್ತಾರೆ. ಆದ್ರೆ ಈ ಪರಿವಾಳ ಶಂಕರ್ ಅವರು ನಿರೀಕ್ಷೆಯೇ ಮಾಡದ ಮಟ್ಟಿಗೆ ದಾಖಲೆ ನಿರ್ಮಿಸುವ ಮೂಲಕ ಸಾಧನೆ ಮಾಡಿದೆ. ಅಂದಹಾಗೆ ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಶನ್ ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ ಒಟ್ಟು 26 ಪಾರಿವಾಳಗಳನ್ನ ಏಪ್ರಿಲ್ 16 ರಂದು ದಿಲ್ಲಿ ಯಿಂದ ಹಾರಿಸಲಾಗಿತ್ತು. ಹಾಗೆ ಹಾರಿಸಿದ ಪರಿವಾಳಗಳಲ್ಲಿ ಶಂಕರ್ ರವರು ಸಾಕಿದ ರೆಡ್ ರಾಕೆಟ್ ಪರಿವಾಳ ಒಂದೇ ಏಪ್ರಿಲ್ 24 ರಂದು ಬೆಂಗಳೂರಿಗೆ ಬಂದು ತಲುಪಿದೆ.
ಇದುವರೆಗೆ ಭಾರತದಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ದೂರು ಕ್ರಮಿಸಿರುವ ಪಾರಿವಾಳ ಇದೆ ಮೊದಲು.ಹೀಗೆ ದಾಖಲೆ ಮೂರಿಯುವ ಮೂಲಕ ವಿಜಯ ಸಾಧಿಸಿದ ರೆಡ್ ರಾಕೆಟ್ ಪಾರಿವಾಳದ ಬಗ್ಗೆ ಎಲ್ಲೆಲ್ಲಿಯೂ ಪ್ರಶಾಂಸೆ ವ್ಯಕ್ತವಾಗ್ತಿದೆ. ಪ್ರತಿಬಾರಿಯೂ ದೆಹಲಿಯಲ್ಲಿ ರೇಸ್ ಆಯೋಜಿಸಲಾಗ್ತಿದೆ. ಆ ರೇಸ್ ನಲ್ಲಿ ಹಲವು ಪರಿವಾಳವನ್ನ ಹಾರಿಬಿಡಲಾಗುತ್ತೆ . ಹಾಗೆ ಬಿಡುವ ಪರಿವಾಳಗಳು ಹೇಗೆ ಅತಿವೇಗವಾಗಿ ಓಡಿ ಸಾಧನೆ ಮಾಡುತ್ತೆ ಅನ್ನುವುದೇ ಪ್ರಶ್ನೆ . ಹೀಗೆ ಹಲವು ಕಂಪನಿಗಳ ಪರಿವಾಳಗಳು ರೇಸ್ ಸ್ಪರ್ಧೇಯಲ್ಲಿ ಭಾಗವಹಿಸುತ್ತದೆ.ಹಾಗೆ ಭಾಗವಹಿಸಿದ ಪರಿವಾಳಗಳಲ್ಲಿ ರೆಡ್ ರಾಕೆಟ್ ಪರಿವಾಳ ಕೇವಲ 9 ದಿನದಲ್ಲಿ ಬೆಂಗಳೂರಿನ ಕೊರಮಂಗಲದ ತನ್ನ ಗುಡಿಗೆ ಸೇರಿಕೊಂಡು ಹೊಸ ದಾಖಲೆ ಸೃಷ್ಠಿ ಮಾಡಿದೆ. ಇನ್ನು ರೆಡ್ ರಾಕೆಟ್ ಪರಿವಾಳ ಮರಳಿ ತನ್ನ ಗುಡು ಸೇರಿರುವುದರ ಬಗ್ಗೆ ರೆಡ್ ರಾಕೆಟ್ ಪರಿವಾಳದ ಶಂಕರ್ ಖುಷಿ ವ್ಯಕ್ತಪಡಿಸಿದ್ದಾರೆ.
ಇನ್ನು ನವೀನ್ ಮತ್ತು ಶಂಕರ್ ಇಬ್ಬರು ಪಕ್ಷಿ ಪ್ರೀಯರು ಚಿಕ್ಕದಿನಿಂದ ಪರಿವಾಳಗಳನ್ನ ಸಾಕುತ್ತಾ ರೇಸ್ ಗೆ ಸಜ್ಜುಮಾಡ್ತಾರೆ. ಹೀಗಾಗಿ ಇವರು ತಮ್ಮ ಮನೆಯಲ್ಲಿ ವಿವಿಧ ತಾಳಿಯ ಪರಿವಾಳಗಳನ್ನ ಸಾಕುತ್ತಿದ್ದಾರೆ. ಅದಕ್ಕೆ ಬೇಕಾದಂತಹ ಫುಡ್ ಗಳನ್ನ ಹಾಕುತ್ತಾ ರಕ್ಷಣೆ ಮಾಡ್ತಿದ್ದಾರೆ. ಹಾಗೆ ಪ್ರತಿವರ್ಷ ಡಿಸಂಬರ್ ನಲ್ಲಿ ನಡೆಯುವ ಸ್ಪರ್ಧೆಗೆ ಪಕ್ಷಿಗಳನ್ನ ಸಜ್ಜುಮಾಡ್ತಾರೆ. ಹೀಗೆ ಸಜ್ಜು ಮಾಡಿದ ಪಕ್ಷಿಗಳಲ್ಲಿ ರೆಡ್ ರಾಕೆಟ್ ಪರಿವಾಳವು ಒಂದು ಈ ಪರಿವಾಳ ದಾಖಲೆ ನಿರ್ಮಾಣ ಮಾಡಿದ್ದು ರೇಸ್ ನಲ್ಲಿ 2 ನೇ ಸ್ಥಾನ ಪಡೆದುಕೊಂಡಿದೆ . ಇನ್ನು ಈ ಬಾರಿ ಡಿಸಂಬರ್ ತಿಂಗಳಿ ನಲ್ಲಿ ನಡೆಯುವ ಕರ್ನಾಟಕ ಹೋಮಿಂಗ್ ಫೀಜನ್ ಫೆಡರೇಷನ್ ರೇಶ್ ಗೆ ಈ ರೆಡ್ ರಾಕೆಟ್ ಪರಿವಾಳ ದಾಖಲೆ ನಿರ್ಮಿಸಲು ಸಜ್ಜಾಗ್ತಿದೆ.
ಎಲ್ಲಿ ಬಿಟ್ರು ರಾಕೆಟ್ ಸ್ಪೀಡ್ ನಲ್ಲಿ ಹಾರಿಕೊಂಡು ಬಂದು ಪರಿವಾಳ ತನ್ನ ಗೂಡು ಸೇರುತ್ತೆ. ಈ ಪರಿವಾಳವನ್ನ ಯಾರು ಕೂಡ ಹಿಡಿಯಲು ಸಾದ್ಯವಿಲ್ಲ . ಅಷ್ಟು ವೇಗವಾಗಿ ಹಾರುತ್ತೆ . ಇನ್ನು ಈ ಬಾರಿಯ ರೇಸ್ ಸ್ಪರ್ಧೆಯಲ್ಲಿ ಕರ್ನಾಟಕದ ಘನತೆಯನ್ನ ಮತ್ತಷ್ಟು ಹೆಚ್ಚಿಸುವ ಎಲ್ಲ ಲಕ್ಷಣ ಕಾಣ್ತಿದೆ. ಹೀಗೆ ಪರಿವಾಳ ಈ ಬಾರಿಯ ಸ್ಪರ್ಧೆಯಲ್ಲಿ ಗೆದ್ದು ವಿಶ್ವದಾಖಲೆ ನಿರ್ಮಿಸಲಿ ಎಂಬುದೇ ನಮ್ಮ ಅಶಯವು ಆಗಿದೆ.