ದೇಶದ ಜನ್ರು ನನ್ನನ್ನು ಎಲೆಕ್ಷನ್ ಗೆ ನಿಲ್ಸಿತ್ತಿದ್ದಾರೆ ಎಂದ ಮಾಜಿ ಪ್ರಧಾನಿ

ಸೋಮವಾರ, 18 ಮಾರ್ಚ್ 2019 (17:45 IST)
ನಾನು ಚುನಾವಣೆಗೆ ನಿಲ್ಲುವ ತೀರ್ಮಾನ ಮಾಡಿಲ್ಲ. ಆದರೆ ದೇಶದ ಜನರು ನನ್ನನ್ನ ಚುನಾವಣೆಗೆ ನಿಲ್ಲಿಸಲು ತೀರ್ಮಾನ ಮಾಡಿದ್ದಾರೆ ಅಂತ ಮಾಜಿ ಪ್ರಧಾನಿ ಹೇಳಿದ್ದಾರೆ.

ಕಳೆದ 14 ವರ್ಷಗಳಲ್ಲಿ ಸಂಸತ್ ನಲ್ಲಿ ನನಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ನನಗೆ ನೋವಿದೆ. ಮೋದಿಯವರು ಮತ್ತೆ ಅಧಿಕಾರ ಪಡೆಯಲು ಹಪಾಪಿಸುತ್ತಿದ್ದಾರೆ. ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ಮೋದಿ ಎಐಡಿಎಂಕೆ ಹಾಗೂ ಶಿವಸೇನಾ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಮಧುಬಂಗಾರಪ್ಪ ಪರ ಪ್ರಚಾರ ಮಾಡಲು ನಾನು ಬರುತ್ತೇನೆ. ಜನರ ಬಳಿ ನಾನು ಮತ ಭೀಕ್ಷೆ ಬೇಡುತ್ತೇನೆ. ಹೀಗಂತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

ಚೀನಾ ದೇಶದ ಅಧ್ಯಕ್ಷರು 35 ವರ್ಷ ಭಾರತಕ್ಕೆ ಬಂದಿರಲಿಲ್ಲ. ನಾನು ಚೀನಾದ ರಾಯಭಾರಿಗೆ ತಿಳಿಸಿ ಭಾಂದವ್ಯ ಬೆಳೆಬೇಕು ಎನ್ನುವ ಕಾರಣಕ್ಕೆ ಅಧ್ಯಕ್ಷರು ಭಾರತಕ್ಕೆ ಬರುವಂತೆ ಹೇಳಿದ್ದೆ. 35 ವರ್ಷದ ಬಳಿಕ ಚೀನಾದ ಅಧ್ಯಕ್ಷರು ಬಂದಿದ್ದ ಕಾರಣ ನಾನೇ ಏರ್ ಪೊರ್ಟ್ ಗೆ ಹೋಗಿ ಬರಮಾಡಿಕೊಂಡಿದ್ದೆ. ನನಗೆ ರಾಜಕೀಯ ವ್ಯಾಮೋಹವಿಲ್ಲ, ನಾನು ಜಾತಿ ವಿರೋಧಿ ಅಲ್ಲ. ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿಯವರು ಅಪಹಾಸ್ಯ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರನ್ನ ಮೇಯರ್ ಆಗಿ ಮಾಡಿದ್ದು ದೇವೇಗೌಡರು ಎಂದ ಅವರು, ಮಧು ಬಂಗಾರಪ್ಪ ಚುನಾವಣೆ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಈಗ ನಡೆಯುತ್ತಿರುವ ಮಹಾ ಚುನಾವಣೆಯಲ್ಲಿ ಮಧು ಬಂಗಾರಪ್ಪ ಗೆಲ್ಲಬೇಕು. ದೇಶಕ್ಕೆ ಒಂದು ಸಂದೇಶ ರವಾನಿಸಬೇಕು ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ