ಕ್ಷುಲ್ಲಕ ಕಾರಣಕ್ಕಾಗಿ ಮದುವೆಯಾಗಬೇಕಿದ್ದ ಹುಡುಗನಿಗೆ ಹುಡುಗಿಯೊಬ್ಬಳು ಚಾಕುವಿನಿಂದ ಇರಿದಿದ್ದಾಳೆ.
ನಿನಗೆ ಗಿಫ್ಟ್ ಕೊಡಬೇಕಿದೆ ಅಂತ ಹೇಳಿ ಹುಡುಗನನ್ನು ನಂಬಿಸಿದ ಹುಡುಗಿಯು ಆತನ ಕಣ್ಣಿಗೆ ಬಟ್ಟೆಕಟ್ಟಿ ಚಾಕು ಇರಿದಿದ್ದಾಳೆ.
ಮೈಸೂರಿನ ಸುರಗಳ್ಳಿಯಲ್ಲಿ ಘಟನೆ ನಡೆದಿದ್ದು, ರವಿಕುಮಾರ ಎಂಬಾತ ಚಾಕು ಇರಿತಕ್ಕೆ ಒಳಗಾದವನಾಗಿದ್ದಾನೆ.
ಯುವತಿಯ ಮನೆಯಲ್ಲೇ ಘಟನೆ ನಡೆದಿದ್ದು, ಹುಡುಗಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.