ಮದುವೆಯಾದರೆ ಮಾತ್ರ ಮಕ್ಕಳು ಹುಟ್ಟುತ್ತಾವಾ?
ಸೋಮವಾರ, 2 ಮಾರ್ಚ್ 2020 (16:54 IST)
ಸಮಸ್ಯೆ : ಸರ್ ನನಗೀಗ 33 ವರ್ಷ . ನನ್ನ ಯಜಮಾನರಿಗೆ 38 ವರ್ಷವಾಗಿದೆ . ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಮಕ್ಕಳಾಗಿಲ್ಲ . ವೈದ್ಯರಲ್ಲಿಗೆ ತೋರಿಸಿದಾಗ ನನಗೆ ಹಾಗೂ ಪತಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ . ನಾವಿಬ್ರೂ ತುಂಬಾ ಚೆನ್ನಾಗಿ ರೋಮ್ಯಾನ್ಸ್ ಮಾಡ್ತೇವೆ . ಹಗಲು ರಾತ್ರಿ ಎನ್ನದೇ ಸುಖ ಅನುಭವಿಸುತ್ತೇವೆ . ಆದರೂ ಯಾಕೆ ಮಕ್ಕಳಾಗಿಲ್ಲ ಎಂದೇ ಚಿಂತೆಯಾಗಿದೆ . ಆದರೆ ಸಂಭೋಗ ನಡೆಸಿದ ಬಳಿಕ ಗುಪ್ತಾಂಗದಿಂದ ವೀರ್ಯ ಹೊರ ಬರುತ್ತದೆ . ಇದರಿಂದ ಮಕ್ಕಳಾಗದಿರಬಹುದೇ ? ಪರಿಹಾರ ತಿಳಿಸಿ .
ಸಲಹೆ : ನಿಮಗಿನ್ನೂ ಮದುವೆಯಾಗಿ ಮೂರ್ನಾಲ್ಕು ವರ್ಷವಷ್ಟೇ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಾಗುವ ಸಾಧ್ಯತೆ ಇದೆ . ಅಲ್ಲದೆ ವೈದ್ಯರು ನಿಮಗಿಬ್ಬರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವಾಗ ಯಾವುದಕ್ಕೂ ಚಿಂತೆ ಪಡುವ ಅಗತ್ಯವಿಲ್ಲ . ಸಂಭೋಗ ನಡೆಸುವ ಭಂಗಿಗೂ ಮಕ್ಕಳಾಗದಿರುವುದಕ್ಕೂ ಯಾವುದೇ ಸಂಬಂಧವಿಲ್ಲ . ಯಾಕೆಂದರೆ ಸಂಪರ್ಕ ನಡೆಸುವಾಗ ಪುರುಷನ ವೀರ್ಯವು ಸ್ತೀ ಜನನಾಂಗದೊಳಗಡೆ ಚಿಮ್ಮುವುದರಿಂದ ಸಹಜವಾಗಿಯೇ ಗರ್ಭಾಶಯ ತಲುಪುತ್ತದೆ . ಸಂಬೋಗದ ನಂತರ ಗುಪ್ತಾಂಗದಿಂದ ವೀರ್ಯ ಹೊರಬರುವುದು ಕೂಡಾ ತೀರಾ ಸಹಜ .
ಅನಿಯಮಿತ ಋತುಚಕ್ರದಿಂದಲೂ ಗರ್ಭಧಾರಣೆಗೆ ತಡೆಯುಂಟಾಗಬಹುದು . ಬಹುತೇಕ ಮಹಿಳೆಯರು ತಮ್ಮ ಕುಟುಂಬವನ್ನು ಆರಂಭಿಸಲು ಯೋಚಿಸುವುದೇ 30 ರ ನಂತರ . ಕೆಲವು ಈ ಅವಧಿಯಲ್ಲಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ . ನಿರಂತರವಾಗಿ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.
ಆ್ಯಪ್ನಲ್ಲಿ ವೀಕ್ಷಿಸಿ x