ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾದ ಸರ್ಕಾರ...!

ಭಾನುವಾರ, 23 ಜುಲೈ 2023 (20:27 IST)
ರಾಜ್ಯದಲ್ಲಿ ಮುಂಗಾರು ಈ ವರ್ಷ ತಡವಾಗಿ ಆಗಮಿಸಿದೆ ಇದರಿಂದ ಹಲವು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಉಂಟಾಯಿತು .ಕುಡಿಯುವ ನೀರಿಗಾಗಿ 10 ಕೀಲೋ ಮೀಟರ್ ಹೋಗುವ ಪರಿಸ್ಥಿತಿ ಉಂಟಾಯಿತು‌. ಈ ಹಿನ್ನಲೆ ಸರ್ಕಾರಕ್ಕೆ ಸಾರ್ವಜನಿಕರು,ವಿಪಕ್ಷನಾಯಕರು ಆಡಳಿತ ರೋಡ ಪಕ್ಷದ ಶಾಸಕರು ಸೇರಿದಂತೆ ಹಲವರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದ್ರು.ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಬೇಕು ಕುಡಿಯುವ ನೀರಿಗಾಗಿ ಹೆಚ್ಚಿಗೆ ಹಣ ಬಿಡುಗಡೆ ಮಾಡಬೇಕು  ಎಂದು ಬಜೆಟ್ ಅಧಿವೇಶನ ವೇಳೆ ಹಲವು ಶಾಸಕರು ಒತ್ತಾಯಿಸಿದ್ರು‌‌.ಈದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ರಾಜ್ಯದಲ್ಲಿ  ವಾಡಿಕೆಗಿಂತ ಕಡಿಮೆ ಮಳೆ ಆಗಿದೆ.ರಾಜ್ಯಕ್ಕೆ ಮುಂಗಾರು ಪ್ರವೇಶ ತಡವಾಗಿದೆ.ಈದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.ಆದರೆ ಮುಂದೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಇನ್ನೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರದಿಂದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಲು ಮುಂದಾದ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆ ಇಂದು ಒಟ್ಟು 6.14 ಕೋಟಿ ಹಣ ಬಿಡುಗಡೆ ಮಾಡಿದೆ.ಒಟ್ಟು 101 ತಾಲೂಕಗಳ 366 ಗ್ರಾಮಪಂಚಾಯತಿಗಳಲ್ಲಿ 514 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ಸರ್ಕಾರ ಹಣ ಬಿಡುಗಡೆ ಮಾಡಿದೆ.ಟ್ಯಾಂಕರ್ ಗಳ ಮೂಲಕ 703 ಟ್ರಿಪ್ ಗಳ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲು ವ್ಯವಸ್ಥೆ ಮಾಡಿದೆ. ಅಲ್ಲದೆ 465 ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡಲು ಹಣ ಮಂಜೂರು ಮಾಡಿದೆ.ಈ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖಾರ್ಗೆ ಮಾಹಿತಿ ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ