ವೈನ್ ಭದ್ರತಾ ಚೀಟಿ ವೆಚ್ಚವನ್ನ ಸರ್ಕಾರ ಹಿಂಪಡೆದಿದೆ. ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿ ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸಲಾಗಿತ್ತು. ಇದರಿಂದಾಗಿ ಗ್ರಾಹಕರು ಪ್ರತಿ ಬಾಟಲಿ ಮದ್ಯಕ್ಕೆ 31.74 ಪೈಸೆಯಷ್ಟು ಹೆಚ್ಚುವರಿ ದರ ಪಾವತಿಸಬೇಕಿತ್ತು. ಈ ಹಿಂದೆ EAL ವೆಚ್ಚವೂ ಸೇರಿ ಮದ್ಯದ ಬಾಟಲಿಯ ಗರಿಷ್ಠ ಮಾರಾಟ ದರ ನಿಗದಿಯಾಗುತ್ತಿತ್ತು. ಅದರಲ್ಲಿ ಮದ್ಯ ತಯಾರಕರೇ EAL ವೆಚ್ಚ ಭರಿಸಬೇಕಿತ್ತು. ಇದನ್ನು ಬದಲಿಸಿ ಸರ್ಕಾರ ಗ್ರಾಹಕರಿಗೆ ವರ್ಗಾಯಿಸಿತ್ತು. ಅಲ್ಲದೆ ಖಾಸಗಿ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ಗೆ ಟೆಂಡರ್ ನೀಡಿತ್ತು.ಮಾಧ್ಯಮಗಳ ವರದಿಯಿಂದ ಎಚ್ಚೆತ್ತ ಅಬಕಾರಿ ಇಲಾಖೆ ಆದೇಶವನ್ನ ವಾಪಸ್ ಪಡೆದಿದೆ.