ಆರ್ ಟಿ ಇ ರದ್ದು ಮಾಡೋದಿಲ್ಲ ಎಂದ ಸರಕಾರ
ಆರ್ ಟಿ ಇ ರದ್ದು ಪಡಿಸಲು ಬರುವುದಿಲ್ಲ. ಹೀಗಂತ ಶಿಕ್ಷಣ ಸಚಿವರು ಹೇಳಿದ್ದಾರೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸಬೇಕು. ಹೀಗಂತ ಚಿತ್ರದುರ್ಗದಲ್ಲಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಇನ್ನು, ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ಆದೇಶ ನೀಡೋದನ್ನ ಕಾಯುತ್ತಿದ್ದೇವೆ.
ನಮಗೆ ಸುಪ್ರೀಂಕೋರ್ಟ್ ಆದೇಶ ಏನು ಬರುತ್ತದೆ ಎಂಬುದರ ಅಗತ್ಯವಿದೆ. ಸ್ಪೀಕರ್ ಕೊಟ್ಟಿದ್ದ ಆದೇಶ ಸರಿಯಿಲ್ಲ ಎಂಬುದು ನಮ್ಮ ವಾದವಾಗಿದೆ ಎಂದಿದ್ದಾರೆ.
ನಮ್ಮ ವಾದವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯುತ್ತದೆ ಎಂಬ ವಿಶ್ವಾಸವಿದೆ ಅಂತ ಸುರೇಶ್ ಕುಮಾರ್ ಹೇಳಿದ್ರು.