ಲೋಕಸಭಾ ಚುನಾವಣೆವರೆಗೂ ಸರ್ಕಾರಕ್ಕೆ ಕಿಂಚಿಂತೂ ಧಕ್ಕೆ ಆಗಬಾರದು- ಸಿದ್ದರಾಮಯ್ಯಗೆ ಹೈಕಮಾಂಡ್ ನಿಂದ ಸೂಚನೆ
ಗುರುವಾರ, 7 ಫೆಬ್ರವರಿ 2019 (15:37 IST)
ಬೆಂಗಳೂರು : ಒಂದು ವೇಳೆ ಕಾಂಗ್ರೆಸ್ ನ ಅತೃಪ್ತ ಶಾಸಕರು ಬಂಡಾಯವೆದ್ದರೆ ಸರ್ಕಾರವನ್ನು ಬಚಾವ್ ಮಾಡೋದು ನಿಮ್ಮ ಜವಾಬ್ದಾರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ,’ ಸರ್ಕಾರ ಬಿದ್ರೂ ಎದ್ರು ಅದಕ್ಕೆ ನೀವೇ ಹೊಣೆಯಾಗಲಿದ್ದೀರಿ. ನೀವು ಏನ್ ಮಾಡ್ತಿರೋ ಗೊತ್ತಿಲ್ಲ. ಸರ್ಕಾರವನ್ನು ಬಚಾವ್ ಮಾಡೋದು ನಿಮ್ಮ ಜವಾಬ್ದಾರಿಯಾಗಿದೆ. ಇದುವರೆಗೂ ಎಲ್ಲವೂ ನೀವು ಹೇಳಿದಂತೆ ನಡೆದಿದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ.
‘ಸಚಿವ ಸ್ಥಾನ ಕಳೆದುಕೊಂಡವರೇ ಬಂಡಾಯವೆದ್ದು ಸರ್ಕಾರ ಬೀಳಿಸಲು ಮುಂದಾಗಿದ್ದಾರೆ. ಮುಂದಿನ ಎಲ್ಲಾ ಬೆಳವಣಿಗೆಗಳಿಗೆ ನೀವೇ ಸಂಪೂರ್ಣ ಜವಾಬ್ದಾರರು, ಲೋಕಸಭಾ ಚುನಾವಣೆವರೆಗೂ ಸರ್ಕರಕ್ಕೆ ಕಿಂಚಿಂತೂ ಧಕ್ಕೆ ಆಗಬಾರದು’ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಖಡಕ್ಕಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.