ಅತೃಪ್ತ ಶಾಸಕರಿಗೆ ಡೆಡ್ ಲೈನ್ ನೀಡಿದ್ದ ಸಿದ್ದರಾಮಯ್ಯ!

ಗುರುವಾರ, 7 ಫೆಬ್ರವರಿ 2019 (15:28 IST)
ಮೈತ್ರಿ ಸರಕಾರಕ್ಕೆ ಸಂಕಟ ಶುರುವಾಗಿರುವ ಬೆನ್ನಲ್ಲೇ ಕಾಂಗ್ರೆಸ್ ನ ಅತೃಪ್ತ ಶಾಸಕರಿಗೆ ಡೆಡ್ ಲೈನ್ ನೀಡಿರುವುದು ಕುತೂಹಲ ಕೆರಳಿಸಿದೆ.

ಸದನಕ್ಕೆ ಗೈರುಹಾಜರಾಗಿರುವ ಕಾಂಗ್ರೆಸ್ ನ 9 ಶಾಸಕರು ತಮ್ಮ ಮುಂದೆ ಇಂದು ಸಂಜೆಯೊಳಗೆ ಖುದ್ದಾಗಿ ಹಾಜರು ಆಗಬೇಕು. ಹೀಗಂತ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅತೃಪ್ತ ಶಾಸಕರಿಗೆ ಗಡವು ನೀಡಿದ್ದಾರೆ.
ಶಾಸಕರಾದ ರಮೇಶ ಜಾರಕಿಹೊಳಿ, ಉಮೇಶ ಜಾಧವ, ಮಹೇಶ ಕಮಠಳ್ಳಿ, ಬಿ.ನಾಗೇಂದ್ರ ಖುದ್ದಾಗಿ ಹಾಜರಾಗದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಮುಂದಾಗಿದೆ.

ಶಾಸಕರಿಗೆ ವಿಪ್ ಜಾರಿ ಮಾಡಿದರೂ ಕಲಾಪಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದಾರೆ. ಹೀಗಾಗಿ ಇಂದು ಸಂಜೆಯೊಳಗೆ ಸಿದ್ದರಾಮಯ್ಯನವರ ಮುಂದೆ ಹಾಜರಾಗದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಗೆ ಕಾಂಗ್ರೆಸ್ ಮುಖಂಡರು ದೂರು ನೀಡಲು ಸಜ್ಜಾಗಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ