ಆ ಅಧಿಕಾರಿಯ ವರ್ತನೆಯನ್ನು ನೋಡಿದವರು ಇವರು ಮಕ್ಕಳ ರಕ್ಷಣಾಧಿಕಾರಿನಾ ? ಅಥವಾ ಶಿಕ್ಷಿಸೋ ಅಧಿಕಾರಿನಾ ? ಎಂದು ಪ್ರಶ್ನಿಸುತ್ತಿದ್ದಾರೆ.
ಕೋಲಾರದಲ್ಲಿ ರಾಕ್ಷಸನಂತೆ ವರ್ತಿಸಿದ್ದಾರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ. ಇವರು ಮಕ್ಕಳ ರಕ್ಷಣಾಧಿಕಾರಿನಾ ? ಅಥವಾ ಶಿಕ್ಷೆ ಕೊಡಿಸೋ ಅಧಿಕಾರಿನಾ ? ಎಂದು ಜನರು ಖಾರವಾಗಿ ಕೇಳಲಾರಂಭಿಸಿದ್ದಾರೆ.
ಬಾಲ ಮಂದಿರದಲ್ಲಿ ರಾಕ್ಷಸನಂತೆ ವರ್ತಿಸಿದ್ದಾರೆ ಮಕ್ಕಳ ರಕ್ಷಣಾಧಿಕಾರಿ. ಬಾಲಮಂದಿರದಲ್ಲಿ ಇಬ್ಬರು ಮಕ್ಕಳಿಗೆ ಮನಬಂದಂತೆ ಥಳಿಸಿದ್ದಾರೆ.
ಕೋಲಾರ ಜಿಲ್ಲೆ ಕೆಜಿಎಪ್ ಪಟ್ಟಣದಲ್ಲಿನ ಸರ್ಕಾರಿ ಬಾಲ ಮಂದಿರದಲ್ಲಿ ಘಟನೆ ನಡೆದಿದೆ. 16 ವರ್ಷದ ರಮೇಶ್ ಮತ್ತು 12 ವರ್ಷದ ಕಿರಣ್ ಎನ್ನುವರಿಗೆ ಥಳಿಸಿದ ಅಧಿಕಾರಿ ಕ್ರಮಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.
ರಾಜೇಶ್ ಬಾಲಮಂದಿರ ಅಧೀಕ್ಷಕ ಹಾಗು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾಗಿದ್ಧಾರೆ. ಮಕ್ಕಳನ್ನ ಕೊಠಡಿಯಲ್ಲಿ ಥಳಿಸ್ತಿರುವ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ರಮೇಶ್ ಎನ್ನುವ ಬಾಲಕನಿಗೆ ಕಾಲಲ್ಲಿ ಒದ್ದು, ಕೈಯಿಂದ ಹಲ್ಲೆ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಲಭ್ಯವಾಗಿವೆ.
ಮೇ 23 ರಂದು ರಾತ್ರಿ 8 ಗಂಟೆ ಹೊತ್ತಲ್ಲಿ ನಡೆದಿರುವ ಘಟನೆ ಇದಾಗಿದೆ. ಅಧಿಕಾರಿ ರಮೇಶ್ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿಬರುತ್ತಿದೆ.