ಹೊಸತಡುಕಿಗೆ ಮತ್ತೆ ಹಲಾಲ್-ಜಟ್ಕಾ ಸದ್ದು

ಮಂಗಳವಾರ, 21 ಮಾರ್ಚ್ 2023 (19:36 IST)
ಬೇವು-ಬೆಲ್ಲದ ಹಬ್ಬಕ್ಕೆ ಸಿಲಿಕಾನ್ ಸಿಟಿ ಜನರು ಸಜ್ಜಾಗುತ್ತಿದ್ರೆ, ಇತ್ತ ಹೊಸತಡುಕಿಗೂ ಮೊದಲೇ ಬಾಯ್ಕಾಟ್ ಹಲಾಲ್ ಅಭಿಯಾನ ಸದ್ದುಮಾಡ್ತಿದೆ.ಹಲಾಲ್ ಕಟ್ ಮಾಂಸಕ್ಕೆ ಸೆಡ್ಡು ಹೊಡೆಯಲು ಸಜ್ಜಾದ ಹಿಂದೂ ಸಂಘಟನೆಗಳು, ಹಲಾಲ್ ವಿರುದ್ಧ ಜಾಗೃತಿ ಅಭಿಯಾನ ಆರಂಭಿಸಿವೆ.ಯುಗದ ಮೊದಲ ಹಬ್ಬ ಯುಗಾದಿಗೆ ಈ ಬಾರಿಯೂ ಧರ್ಮದಂಗಲ್ ಬಿಸಿ ತಟ್ಟುವ ಸಾಧ್ಯತೆಗಳು ಕಂಡುಬರ್ತಿದೆ. ಈ ಬಾರಿ ಹೊಸತಡುಕಿಗೆ ಹಲಾಲ್ ಮಾಂಸ ಖರೀದಿಸದಂತೆ ಹಿಂದೂಪರ ಸಂಘಟನೆಗಳು ಕ್ಯಾಂಪೇನ್ ಆರಂಭಿಸಿದೆ. ಬೆಂಗಳೂರಲ್ಲಿ ಬಾಯ್ಕಾಟ್ ಹಲಾಲ್ ಅಭಿಯಾನಕ್ಕೆ ಹಿಂದೂಪರ ಸಂಘಟನೆಗಳು ಚಾಲನೆ ನೀಡಿವೆ.

ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿರೋ ಆಂಜನೇಯನ ದೇಗುಲದಲ್ಲಿ ಪೂಜೆ ಸಲ್ಲಿಸಿದ ಹಿಂದೂಪರ ಸಂಘಟನೆಗಳು,ಹಲಾಲ್ ಉತ್ಪನ್ನಗಳನ್ನ ಖರೀದಿಸಬೇಡಿ ಬದಲಾಗಿ ಜಟ್ಕಾ ಕಟ್ ಮಾಂಸ ಬಳಸಿ ಅಂತಾ ಕರಪತ್ರ ಹಂಚುವ ಮೂಲಕ ಜನರಿಗೆ ಅರಿವು ಮೂಡಿಸಿವೆ.ಇತ್ತ ಯುಗಾದಿಯ ಮರುದಿನ ಸಾಕಷ್ಟು ಜನರು ಮಟನ್,ಚಿಕನ್ ಖರೀದಿಗೆ ಮುಂದಾಗುತ್ತಾರೆ, ಈ ವೇಳೆ ಹಲಾಲ್ ಕಟ್ ಮಾಂಸ ಖರೀದಿಗೆ ಕಡಿವಾಣ ಹಾಕಬೇಕು ಅಂತಾ ಹಿಂದೂಪರ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೂ ಮನವಿ ಪತ್ರ ಸಲ್ಲಿಸಿದೆ

 ಈ ಹಿಂದೆ ಕೂಡ ಸದ್ದುಮಾಡಿದ್ದ ಹಲಾಲ್ ವರ್ಸಸ್ ಜಟ್ಕಾ ಕಟ್ ವಿವಾದ ಇದೀಗ ಮತ್ತೆ ಆರಂಭವಾಗೋ ಸೂಚನೆ ನೀಡ್ತಿದೆ.ಸದ್ಯ ಬಾಯ್ಕಾಟ್ ಹಲಾಲ್ ಕ್ಯಾಂಪೇನ್ ಆರಂಭಿಸಿರೋ ಸಂಘಟನೆಗಳು,ಹಲಾಲ್ ಉತ್ಪನ್ನಗಳ ಖರೀದಿಗೆ ಬ್ರೇಕ್ ಹಾಕಲು ಜಿದ್ದಿಗೆ ಬಿದ್ದಿವೆ.ಸದ್ಯ ಹಿಂದೂಪರ ಸಂಘಟನೆಗಳು ಆರಂಭಿಸಿರೋ ಈ ಅಭಿಯಾನ ಮತ್ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ