ಪ್ರಜ್ವಲ್ ರೇವಣ್ಣ ರೇಪ್ ಕೇಸ್: ಇಂದು ತೀರ್ಪಿನ ದಿನ

Krishnaveni K

ಬುಧವಾರ, 30 ಜುಲೈ 2025 (08:49 IST)

ಬೆಂಗಳೂರು: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ರೇಪ್ ಕೇಸ್ ಸಂಬಂಧ ಇಂದು ಜನಪ್ರತಿನಿಧಿಗಳ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಹೀಗಾಗಿ ಪ್ರಜ್ವಲ್ ಗೆ ಶಿಕ್ಷೆಯೋ, ಖುಲಾಸೆಯೋ ಇಂದು ತೀರ್ಮಾನವಾಗಲಿದೆ.

ಮನೆಕೆಲಸದಾಕೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಲಿದೆ. ಕಳೆದ ವರ್ಷ ಪ್ರಜ್ವಲ್ ರೇವಣ್ಣ ಬಂಧನವಾಗಿತ್ತು. ಅದಾದ ಬಳಿಕ ಅವರು ಬಂಧನದಲ್ಲೇ ಇದ್ದಾರೆ. ಇದೀಗ ಅವರು ಬಿಡುಗಡೆಯಾಗಲಿದ್ದಾರೆಯೇ ಅಥವಾ ಶಿಕ್ಷೆ ಪ್ರಕಟವಾಗಲಿದೆಯೇ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ.

ಜುಲೈ 18 ರಿಂದ ವಾದ-ಪ್ರತಿವಾದ ಆಲಿಸಿದ ಕೋರ್ಟ ವಿಚಾರಣೆ ಪೂರ್ಣಗೊಳಿಸಿತ್ತು. ಇಂದು ತೀರ್ಪು ಪ್ರಕಟಿಸುವುದಾಗಿ ಘೋಷಿಸಿತ್ತು. ತೀರ್ಪು ಪ್ರಕಟ ಸಂಬಂಧ ಇಂದು ಪ್ರಜ್ವಲ್ ರೇವಣ್ಣರನ್ನು ನ್ಯಾಯಾಲಯಕ್ಕೆ ಕರೆತರಲಾಗುತ್ತದೆ. ಅವರ ಮುಂದೆಯೇ ತೀರ್ಪು ಪ್ರಕಟವಾಗಲಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಕೇಸ್ ದಾಖಲಾಗಿತ್ತು. ಈ ಪೈಕಿ ಈಗ ಒಂದು ಕೇಸ್ ನ ಶಿಕ್ಷೆ ಪ್ರಮಾಣ ಮಾತ್ರ ಪ್ರಕಟವಾಗಲಿದೆ. ಇದೀಗ ಮನೆಗೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಮಾತ್ರ ತೀರ್ಪು ಪ್ರಕಟವಾಗಲಿದೆ. ಉಳಿದ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಇಂದು ಈ ಪ್ರಕರಣದಲ್ಲಿ ಖುಲಾಸೆಯಾದರೂ ಪ್ರಜ್ವಲ್ ರೇವಣ್ಣ ಬಿಡುಗಡೆಯಾಗಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ