ಮಾಜಿ ಸಿಎಂ ಜಯಲಲಿತಾ ಸಾವಿನ ಬಗ್ಗೆ ಹೈಕೋರ್ಟ್ ಅನುಮಾನ

ಗುರುವಾರ, 29 ಡಿಸೆಂಬರ್ 2016 (12:22 IST)
ಜಯಲಲಿತಾ ಸಾವಿನ ಬಗ್ಗೆ ಅನುಮಾನ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಯಾಕೆ ಆದೇಶ ನೀಡಬಾರದು ಎಂದು ತಮಿಳುನಾಡು ಸರಕಾರವನ್ನು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ.
 
ಜಯಲಲಿತಾ ಸಾವಿನ ಕುರಿತು ಅನುಮಾನ ವ್ಯಕ್ತವಾಗುತ್ತಿದೆ. ಈ ಕುರಿತು ತನಿಖೆಯಾಗಬೇಕು ಎಂದು ಎಐಡಿಎಂಕೆ ಪಕ್ಷದ ಕಾರ್ಯಕರ್ತ ಜೋಸೆಫ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 
 
ಜಯಲಲಿತಾ ಅವರ ಆರೋಗ್ಯದ ಕುರಿತು ಏಕೆ ಮಾಹಿತಿ ನೀಡಿರಲಿಲ್ಲ. ಜಯಲಲಿತಾ ಸಾವಿನ ಕುರಿತು ಏಕಾಏಕಿ ಘೋಷಿಸಿದ್ದು ಏಕೆ ಎಂದು ಪ್ರಶ್ನಿಸಿರುವ ಮದ್ರಾಸ್ ಹೈಕೋರ್ಟ್, ತನಿಖೆಗೆ ಆದೇಶಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿಜೆ ಪೀಠಕ್ಕೆ ವರ್ಗಾವಣೆ ಮಾಡಿದೆ. 
 
ತಮಿಳುನಾಡು ಮುಖ್ಯಮಂತ್ರಿ ಅಮ್ಮ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಜಯಲಲಿತಾ ಅವರು ಡಿಸೆಂಬರ್ 5ರಂದು ಕೊನೆಯುಸಿರೆಳೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ